ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಡಿಸಿಸಿ ಬ್ಯಾಂಕ್‍ನ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಅವಕಾಶ ಕೋರಿ ಇಂದು ಬ್ಯಾಂಕ್ ನ ಏಳು ಜನ ನಿರ್ದೇಶಕರು ಮನವಿ ಸಲ್ಲಿಸಿದ್ದಾರೆ.
13 ಜನ ನಿರ್ದೇಶಕರಲ್ಲಿ 7 ಜನ ನಿರ್ದೇಶಕರು ಅವಿಶ್ವಾಸ ನಿರ್ಣಯಕ್ಕೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಬ್ಯಾಂಕ್‍ನ ಉಪಾಧ್ಯಕ್ಷ ಹೆಚ್.ಎಲ್.ಷಡಾಕ್ಷರಿ, ಬಸವಾನಿ ವಿಜಯದೇವ್, ಕೆ.ಪಿ. ದುಗ್ಗಪ್ಪಗೌಡ, ಎಂ.ಎಂ. ಪರಮೇಶ್, ಹೆಚ್.ಕೆ. ವೆಂಕಟೇಶ್ ದಿನೇಶ್ ಎಸ್.ಪಿ., ಸುಧೀರ್ ಜಿ.ಎನ್., ಇವರು ಎಂಡಿಗೆ ಇಂದು ಮನವಿ ಸಲ್ಲಿಸಿದರು.
Also read: ಕಾಂಗ್ರೆಸ್ ನಂಬಿಸುವ ಸುಳ್ಳಿನ ಹುನ್ನಾರವನ್ನು ಮನೆಮನೆಗೆ ತಲುಪಿಸಿ: ಸಂಸದ ಬಿ.ವೈ. ರಾಘವೇಂದ್ರ ಕರೆ
ಅಧ್ಯಕ್ಷರಾಗಿರುವ ಚನ್ನವೀರಪ್ಪ ಅವರೇ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ರಾಜೀನಾಮೆ ನೀಡದೆ ಇರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿರುವ ಅಪೆಕ್ಸ್ ಬ್ಯಾಂಕ್‍ನ ಕಚೇರಿಯ ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸಲಾಗುತ್ತದೆ. ಪ್ರಾಧಿಕಾರವು ಪ್ರಾತಿನಿಧಿಕ ಅಧಿಕಾರಿ ಯನ್ನ ನೇಮಕ ಮಾಡಲಿದೆ. ನೇಮಕಗೊಂಡ ನಂತರ 13 ಜನ ನಿರ್ದೇಶಕರಿಗೆ ಪ್ರಾತಿನಿಧಿಕ ಅಧಿಕಾರಿಗಳು 15 ದಿನಗಳಲ್ಲಿ ಒಂದು ದಿನ ಫಿಕ್ಸ್ ಮಾಡಿ ನೋಟೀಸ್ ನೀಡಲಿದೆ. ನಂತರ ಅವಿಶ್ವಾಸ ನಿರ್ಣಯಕ್ಕೆ ಮಂಡನೆಗೆ ಅವಕಾಶ ದೊರೆಯಲಿದೆ.
ಇಷ್ಟರ ನಡುವೆ ಈಗಿನ ಅಧ್ಯಕ್ಷರು ರಾಜೀನಾಮೆ ನೀಡಿದರೆ ಮುಂದಿನ ಪ್ರಕ್ರಿಯೆ ಅರ್ಜಿ ಸಲ್ಲಿಸಿದವರಿಗೆ ಅನುಕೂಲವಾಗಲಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post