ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರ ಬಿಜೆಪಿ ವತಿಯಿಂದ ನಗರದ ಶಿವಪ್ಪನಾಯಕ ವೃತ್ತದಲ್ಲಿ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರ ಆತ್ಮಹತ್ಯೆಗೆ ಕಾರಣರಾದ ಅಧಿಕಾರಿಗಳು ಮತ್ತು ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಾಯಕರಾದ ಗಿರೀಶ್ ಪಟೇಲ್ ಈ ಸರ್ಕಾರಕ್ಕೆ ಸ್ವಲ್ಪ ಕೂಡ ಮಾನವೀಯತೆ, ಮಾನ-ಮಾರ್ಯಾದೆ ಯಾವುದು ಇಲ್ಲ. ಸರ್ಕಾರ ಹಿಟ್ಲರ್‍ನಂತೆ ವರ್ತಿಸುತ್ತಿದ್ದು ಇದು ಕೊಲೆಗಡುಕ ಸರ್ಕಾರವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರೈತ, ನಾಗರೀಕ ವಿರೋಧಿಯಾಗಿದೆ. ರಾಜ್ಯಪಾಲರು ಈ ಸರ್ಕಾರವನ್ನು ವಜಾ ಮಾಡಬೇಕು ಎಂದರು.

Also read: ಶಿವಮೊಗ್ಗ | ಪ್ರಖ್ಯಾತ ಚಿನ್ನಾಭರಣ ಶೋರೂಂನಲ್ಲಿ ಖರೀದಿ ನೆಪದಲ್ಲಿ ಕಳ್ಳತನ
ಮೃತ ಚಂದ್ರಶೇಖರ್’ಗೆ ಇಬ್ಬರು ಮಕ್ಕಳಿದ್ದಾರೆ, ಅವರು ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಇನ್ನು ಮುಂದೆ ನಮ್ಮ ಕುಟುಂಬದ ಗತಿಯೇನು ಎಂದು ಮೃತನ ಪತ್ನಿ ಕಣ್ಣೀರಿಡುತ್ತಿದ್ದಾರೆ. ನಮಗೆ ನ್ಯಾಯ ಕೊಡಿ ಎನ್ನುತ್ತಿದ್ದಾರೆ. ಸರ್ಕಾರ ತಕ್ಷಣ 25 ಲಕ್ಷ ರೂ.ಗಳ ಪರಿಹಾರ ಅಧಿಕಾರಿ ಕುಟುಂಬಕ್ಕೆ ನೀಡಬೇಕು. ಈಶ್ವರಪ್ಪನವರ ಮೇಲೆ ಆರೋಪ ಬಂದಾಗ ಅವರ ರಾಜೀನಾಮೆಗೆ ಪಟ್ಟುಹಿಡಿದ ಸಿದ್ದರಾಮಯ್ಯನವರು ಈಗ್ಯಾಕೆ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ. ದಲಿತರಿಗಾಗಿ ಮೀಸಲಿಟ್ಟ 25 ಸಾವಿರ ಕೋಟಿ ಹಣವನ್ನು ಈ ಸರ್ಕಾರ ಗ್ಯಾರಂಟಿಗೆ ಬಳಸಿಕೊಂಡಿದೆ. ಇದನ್ನು ಕೇಳಿದರೆ ಇದುವರೆಗೂ ಉತ್ತರ ನೀಡಿಲ್ಲ. ಮಾತೆತ್ತಿದರೆ, ಅಂಬೇಡ್ಕರ್ ಬಗ್ಗೆ ಮಾತನಾಡುವ ಕಾಂಗ್ರೆಸ್ ಅಂಬೇಡ್ಕರ್ ಅಂತ್ಯ ಸಂಸ್ಕಾರಕ್ಕೂ ಭೂಮಿ ನೀಡಿಲ್ಲ. ಕಾಂಗ್ರೆಸ್ ನಾಯಕರ ಸಮಾಧಿಗೆ ನೂರಾರು ಎಕರೆ ಭೂಮಿ ನೀಡಿದ್ದಾರೆ ಎಂದರು.

ಶಾಸಕ ಚನ್ನಬಸಪ್ಪ ಮಾತನಾಡಿ, ಈ ಸರ್ಕಾರಕ್ಕೆ ಯಾವುದೇ ನೈತಿಕತೆಯಿಲ್ಲ. ಗೋಹಂತಕ ಬಲಿಯಾದರೆ 10 ಲಕ್ಷ ಘೋಷಿಸುತ್ತಾರೆ. ಪಿತೂರಿಗೆ ಆತ್ಮಹತ್ಯೆ ಮಾಡಿಕೊಂಡ ಡೆತ್‍ನೋಟ್ ಬರೆದಿಟ್ಟು, ಭ್ರಷ್ಟಚಾರದ ಬಣ್ಣ ಬಯಲು ಮಾಡಿದ ಸರ್ಕಾರಿ ನೌಕರನಿಗೆ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ. ಇದು ಆಕ್ಷಮ್ಯ ಅಪರಾಧ. ನಾಚಿಕೆ ಮಾನ ಮಾರ್ಯಾದೆ ಇಲ್ಲದ ಈ ಸರ್ಕಾರವನ್ನು ವಜಾ ಮಾಡಬೇಕು ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post