ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ -25ರ ಕಿ.ಮೀ. 191.25ರಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಾರಂಭಿಸಿರುವುದರಿಂದ ಕೆಲಸ ನಡೆಯುವ ಸಂದರ್ಭದಲ್ಲಿ ಸೇತುವೆ ಮೇಲೆ ಲಘು ವಾಹನಗಳು ಮಾತ್ರ ಸಂಚರಿಸಲು ಅನುಕೂಲವಾಗುವಂತೆ ಹಾಗೂ ಮೇಲ್ಸೇತುವೆಯ ಎರಡು ಬದಿಯಲ್ಲಿ ಬ್ಯಾರಿಕೇಡಿಂಗ್ ಅಳವಡಿಸಲು ಹಾಗೂ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ, ಲಘು ವಾಹನಗಳ ಸಂಚಾರಕ್ಕೆ ಅವಕಾಸ ಮಾಡಿಕೊಡಲು 30 ದಿನಗಳ ಅವಧಿಗೆ ಸವಳಂಗ-ಹೊನ್ನಾಳಿ (ರಾ.ಹೆ.57) ರಸ್ತೆಯ ಮೂಲಕ ಸಂಚರಿಸುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶದಲ್ಲಿ ಸೂಚಿಸಿದ್ದಾರೆ.
ಹೊಸಪೇಟೆ-ಶಿವಮೊಗ್ಗ ಮಾರ್ಗಕ್ಕೆ ಪರ್ಯಾಯ ಮಾರ್ಗವಾಗಿ ಶಿವಮೊಗ್ಗದಿಂದ -ಹೊಳಲೂರು-ಹೊನ್ನಾಳಿಗೆ ಸಂಚರಿಸುವ ಲಘುವಾಹನಗಳು ಸವಳಂಗ ರಸ್ತೆ-ಕುವೆಂಪುನಗರ ಕ್ರಾಸ್-ರಾಗಿಗುಡ್ಡದ ಮೂಲಕ ರಾಜ್ಯ ಹೆದ್ದಾರಿ-25ಕ್ಕೆ ತಲುಪುವುದು.
ಶಿವಮೊಗ್ಗದಿಂದ ಹೊಳಲೂರಿಗೆ ಸಂಚರಿಸುವ ಭಾರಿ ವಾಹನಗಳು ಸವಳಂಗ ರಸ್ತೆ- ಅಬ್ಬಲಗೆರೆ- ಕೊಮ್ಮನಾಳ- ಸೊಮಿನಕೊಪ್ಪ- ಹರಮಘಟ್ಟ- ಹೊಳಲೂರು ಮಾರ್ಗವಾಗಿ ಸಂಚರಿಸುವುದು.
ಶಿವಮೊಗ್ಗದಿಂದ-ಹೊನ್ನಾಳಿ-ಹರಿಹರ ಕಡೆಗೆ ಸಂಚರಿಸುವ ಭಾರಿ ವಾಹನಗಳು ಸವಳಂಗ ರಸ್ತೆ- ಸವಳಂಗ-ನ್ಯಾಮತಿ ಮೂಲಕ ಹೊನ್ನಾಳಿಗೆ ಸಂಚರಿಸುವುದು. ಹೊನ್ನಾಳಿ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಲಘು ವಾಹನಗಳಿಗೆ ಮಾತ್ರ ರೈಲ್ವೆ ಮೇಲ್ಸೇತುವೆ ಮೇಲೆ ಸಂಚರಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post