ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಬೆಂಗಳೂರು-ಮುಂಬೈ-ಕೈಗಾರಿಕಾ ಕಾರಡಾರ್’ಗೆ ಧಾರವಾಡ, ತುಮಕೂರು, ಶಿವಮೊಗ್ಗ ಜಿಲ್ಲೆಯನ್ನು ಸದರಿ ಕೈಗಾರಿಕಾ ಕಾರಡಾರ್’ಗೆ ಸೇರಿಸುವ ಪ್ರಯತ್ನ ನಡೆದಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ವಿಐಎಸ್’ಎಲ್ ಅತಿಥಿಗೃಹದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳ ಆರಂಭಕ್ಕೆ ಅಗತ್ಯವಾದ ವಾತಾವರಣವನ್ನು ಸೃಷ್ಠಿಸುವ ಅಗತ್ಯವಿದೆ. ಕೈಗಾರಿಕೋದ್ಯಮಿಗಳು ಇಲ್ಲಿ ಬಂಡವಾಳ ಹೂಡಿ ಕಾರ್ಖಾನೆಗಳನ್ನು ಆರಂಭಿಸಿದರೆ ಕಾರ್ಮಿಕರಿಗೆ ಕೆಲಸ ಸಿಗುವ ಮೂಲಕ ಅವರ ಬದುಕು ಹಸನಾಗುತ್ತದೆ ಎಂದರು.
ಇಂದು ಹೊಸ ಕಾರ್ಖಾನೆಗಳನ್ನು ತರಬೇಕಾದರೆ ಬಹಳ ಪರಿಶ್ರಮ ಅಗತ್ಯ, ಸರ್’ಎಂವಿ ಅವರ ದೂರದೃಷ್ಠಿಯ ಫಲವಾಗಿ ಭದ್ರಾವತಿಯಲ್ಲಿ ಸ್ಥಾಪಿತವಾದ ಎಂಪಿಎಂ ಮತ್ತು ವಿಐಎಸ್’ಎಲ್ ಕಾರ್ಖಾನೆಗಳನ್ನು ಉಳಿಸಿಕೊಂಡು ಜಿಲ್ಲೆಯಲ್ಲಿನ ಪಶ್ಚಿಮ ಘಟ್ಟಗಳಿಗೆ ತೊಂದರೆ ಆಗದಂತೆ ಇಲ್ಲಿನ ಪರಿಸರಕ್ಕೆ ಧಕ್ಕೆಯಾಗದಂತಹ ಕೈಗಾರಿಕೆಗಳನ್ನು ಸ್ಥಾಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆ ಕೈಗಾರಿಕಾ ಕಾರಡಾರ್’ಗೆ ಸೇರಿದರೆ ಜಿಲ್ಲೆಯ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಆದ್ದರಿಂದ ಜಿಲ್ಲೆಯನ್ನು ಕೈಗಾರಿಕಾ ಕಾರಿಡಾರ್’ಗೆ ಸೇರಿಸುವ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದು, ಕೆಂದ್ರದ ಕೈಗಾರಿಕಾ ಮಂತ್ರಿಗಳೊಂದಿಗೂ ಸಹ ಮಾತುಕತೆ ನಡೆದಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post