No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Friday, April 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಕೋವಿಡ್ ನಿಯಂತ್ರಿಸಲು ಶಿವಮೊಗ್ಗ ಪಾಲಿಕೆ ಸಭೆಯಲ್ಲಿ ಕೈಗೊಂಡಿರುವ ಕ್ರಮಗಳೇನು ಗೊತ್ತಾ? ಇಲ್ಲಿದೆ ಮಾಹಿತಿ

4 ವಾರ್ಡ್‌ಗಳಿಗೆ ಒಂದರಂತೆ 9 ಆರೈಕೆ ಕೇಂದ್ರ ತೆರೆಯಲು ಸಚಿವ ಈಶ್ವರಪ್ಪ ಸೂಚನೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 21, 2021
in ಶಿವಮೊಗ್ಗ
0
ಕೋವಿಡ್ ನಿಯಂತ್ರಿಸಲು ಶಿವಮೊಗ್ಗ ಪಾಲಿಕೆ ಸಭೆಯಲ್ಲಿ ಕೈಗೊಂಡಿರುವ ಕ್ರಮಗಳೇನು ಗೊತ್ತಾ? ಇಲ್ಲಿದೆ ಮಾಹಿತಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ 9 ಕೋವಿಡ್ ಆರೈಕೆ ಕೇಂದ್ರ ತೆರೆಯಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಇಂದು ನಡೆದ ಪಾಲಿಕೆ ಸಭೆಯಲ್ಲಿ ನಿರ್ಧರಿಸಲಾಯಿತು.

ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಕೋವಿಡ್ ಪರಿಶೀಲನಾ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ, ಕಡಿಮೆ ರೋಗ ಲಕ್ಷಣ ಹೊಂದಿದ ಸೋಂಕಿತರ ಆರೈಕೆಗಾಗಿ ಪಾಲಿಕೆ ವ್ಯಾಪ್ತಿಯಲ್ಲಿ 4 ವಾರ್ಡ್‌ಗಳಿಗೊಂದರಂತೆ ೯ ಆರೈಕೆ ಕೇಂದ್ರ ಪ್ರಾರಂಭಿಸಲು ತೀರ್ಮಾನಿಸಲಾಯಿತು.

ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್ ಮಾತನಾಡಿ, ಸೋಂಕು ದೃಢಪಟ್ಟಿರುವ ಸಾಕಷ್ಟು ಜನರು ಮನೆಯಲ್ಲಿಯೇ ಐಸೋಲೇಶನ್‌ನಲ್ಲಿ ಇರುವುದಕ್ಕೆ ಬಯಸಿ, ಆರೈಕೆ ಕೇಂದ್ರಕ್ಕೆ ದಾಖಲಾಗುವುದನ್ನು ತಡೆಯಲು ಶಿಫಾರಸ್ಸಿಗಾಗಿ ಪ್ರಯತ್ನಿಸತ್ತಿರುವುದು ಕೇಳಿಬಂದಿದೆ. ಈ ಹಿನೆಲೆಯಲ್ಲಿ ಶಿಫಾರಸ್ಸಿಗೆ ಮಣಿಯದೆ ಕಡ್ಡಾಯವಾಗಿ ಸೋಂಕಿತರು ಆರೈಕೆ ಕೇಂದ್ರಕ್ಕೆ ದಾಖಲಾಗುವಂತೆ ತಿಳಿಸಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ಪಾಲಿಕೆ ವ್ಯಾಪ್ತಿಯಲ್ಲಿ ಸೋಂಕಿತರ ಪ್ರಕರಣ ಅತಿ ಹೆಚ್ಚು ಕಂಡು ಬಂದ ಸಂದರ್ಭದಲ್ಲಿ ಎಲ್ಲರನ್ನು ಆರೈಕೆ ಕೇಂದ್ರಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನಷ್ಟು ಆರೈಕೆ ಕೇಂದ್ರಗಳ ಅಗತ್ಯವಿದ್ದು ಶ್ರೀಘ್ರದಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಿಗೆ ಅನುಕೂಲವಾಗುವಂತೆ ೯ ಆರೈಕೆ ಕೇಂದ್ರಗಳ ವ್ಯವಸ್ಥೆ ಮಾಡುವಂತೆ ಮಹಾನಗರಪಾಲಿಕೆ ಹಾಗೂ ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು.

ನಾಲ್ಕು ವಾರ್ಡ್‌ಗಳಿಗೆ ಒಂದರಂತೆ ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಬೇಕು. ಹಾಗೂ ಸೋಂಕಿತರಿಗೆ ಅವಶ್ಯವಿರುವ ಎಲ್ಲಾ ಸೌಲಭ್ಯ ಕಲ್ಪಿಸಬೇಕು. ವೈದ್ಯರು ಹಾಗೂ ಶುಶ್ರೂಷಕರನ್ನು ಆರೋಗ್ಯ ಇಲಾಖೆಯಿಂದ ನೇಮಿಸಬೇಕು ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್, ಕೊರೋನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಲೇ ಇದ್ದು, ಪಾಲಿಕೆ ಸದಸ್ಯರು ತಮ್ಮ ವ್ಯಾಪ್ತಿಯ ವಾರ್ಡ್‌ಗಳಲ್ಲಿ ತಂಡ ರಚಿಸಿಕೊಂಡು ಕಾರ್ಯ ನಿರ್ವಹಿಸಬೇಕು ಹಾಗೂ ನಗರವನ್ನು ಕೋವಿಡ್ ಮುಕ್ತವಾಗಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಕೊರೋನಾ ಹರಡುವುದು ತಡೆಯುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಹೊರಗಡೆ ಬಾರದಂತೆ ನಿಗಾ ವಹಿಸಬೇಕು. ಸಾರ್ವಜನಿಕರ ಜೀವ ಕಾಪಾಡುವ ಜವಾಬ್ದಾರಿ ಪಾಲಿಕೆ ಸದಸ್ಯರ ಮೇಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ಕೊರೋನಾ ಸೋಂಕಿತರಲ್ಲಿ ಹೆಚ್ಚಿನವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರು ಮನೆಯಿಂದ ಹೊರಬರುತ್ತಿದ್ದಾರೆ ಎಂದು ಮಾಹಿತಿಯಿದೆ. ಇದರ ಬಗ್ಗೆ ಜಾಗ್ರತೆ ವಹಿಸಬೇಕು. ಪ್ರತಿಯೊಬ್ಬ ಪಾಲಿಕೆ ಸದಸ್ಯರು ಜಿಲ್ಲಾ ಆರೋಗ್ಯ ಇಲಾಖೆ ಜೊತೆ ಸಂಪರ್ಕದಲ್ಲಿದ್ದು, ಸೂಕ್ತ ಸಮಯದಲ್ಲಿ ಸಮಾಲೋಚನೆ ನಡೆಸುವ ಮೂಲಕ ಮಾಹಿತಿ ಸಂಗ್ರಹಿಸಬೇಕು ಎಂದು ಹೇಳಿದರು.

ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಇಂದಿರಾ ಕ್ಯಾಂಟೀನ್‌ನಲ್ಲಿ ಪಾಲಿಕೆ ವತಿಯಿಂದ ಉಚಿತ ಆಹಾರ ವಿತರಿಸಲಾಗುತ್ತಿದ್ದು, ಮೂಲ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ಆಹಾರದ ಗುಣಮಟ್ಟದ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.

ಸದಸ್ಯ ನಾಗರಜ್ ಕಂಕಾರಿ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಆದ್ದರಿಂದ ಸಮುದಾಯ ಭವನಗಳಲ್ಲಿ ಸ್ಥಳೀಯರು ಹಾಗೂ ಸಂಘ ಸಂಸ್ಥೆಗಳ ನೆರವನ್ನು ಪಡೆದು ಆರೈಕೆ ಕೇಂದ್ರ ಸ್ಥಾಪಿಸಬೇಕು. ಮನೆ ಕೆಲಸ ಮಾಡುವರರು, ಬೀಡಿ ಕಟ್ಟುವವರು, ಟೈಲರಿಂಗ್ ವೃತ್ತಿ ಮಾಡುವವರಿಗೆ ಹಾಗೂ ಹಮಾಲರು ಸಂಕಷ್ಟದಲ್ಲಲಿದ್ದು, ಅವರನ್ನು ಗುರುತಿಸಿ ಅಗತ್ಯ ದಿನಬಳಕೆಯ ವಸ್ತುಗಳನ್ನೊಳಗೊಂಡ ಕಿಟ್ ಕೊಡುವ ವ್ಯವಸ್ಥೆ ಆಗಬೇಕು ಎಂದು ಒತ್ತಾಯಿಸಿದರು.

ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸಂಘ ಸಂಸ್ಥೆಗಳ ನೆರವನ್ನು ಪಡೆದು ಪ್ರತಿ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಕೋವಿಡ್ ನಿಯಂತ್ರಿಸಲು ಹೆಚ್ಚಿನ ಗಮನ ಹರಿಸಬೇಕು. ಕಳೆದ ಬಾರಿ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರದ ಕಿಟ್ ವಿತರಣೆ ಮಾಡಲಾಗಿತ್ತು. ಈ ಬಾರಿ ಸರ್ಕಾರದಿಂದಲೇ ಪಡಿತರ ರೂಪದಲ್ಲಿ ಅಕ್ಕಿ, ಗೋಧಿ ವಿತರಿಸಲಾಗಿದೆ. ಹೀಗಾಗಿ ಇನ್ನಿತರ ಅಗತ್ಯ ವಸ್ತುಗಳನ್ನು ನೀಡುವುದು ಒಳಿತು. ಈ ನಿಟ್ಟಿನಲ್ಲಿ ಪಾಲಿಕೆ ಚಿಂತನೆ ನಡೆಸಲಿ ಎಂದು ಸಲಹೆ ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿನ ಕೆಲವು ವಾರ್ಡ್‌ಗಳಲ್ಲಿ ಸರಿಯಾಗಿ ಸ್ಯಾನಿಟೈಸೇಷನ್ ಹಾಗೂ ಸ್ವಚ್ಚತೆಗೆ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ರಾಜೀವ್‌ಗಾಂಧಿ ಬಡಾವಣೆಯಲ್ಲಿರುವ ಚಿತಾಗಾರದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಆಂಬುಲೆನ್ಸ್ ನಿಲ್ಲುತ್ತಿದ್ದು, ಸ್ಥಳೀಯ ಜನರು ಸೋಂಕು ಹರಡುವ ಭಯದಿಂದ ಆತಂಕದಲ್ಲಿದ್ದಾರೆ. ಹಾಗೂ ಶವ ಸುಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಚಿತಾಗಾರವನ್ನು ಸ್ಥಳಾಂತರ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಸುರಕ್ಷಾ ಕ್ರಮ ಕೈಗೊಳ್ಳಬೇಕಿದೆ ಎಂದು ವಿಪಕ್ಷ ನಾಯಕಿ ಯಮುನಾ ರಂಗೇಗೌಡ ಹೇಳಿದರು.

ಸಭೆಯಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಪಾಲಿಕೆ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: CoronaCovidIndira CanteenKannada NewsKannada News LiveKannada News OnlineKannada News WebsiteKannada WebsiteLatest News KannadaLocal NewsMalnad NewsMinister KS EshwarappaNews in KannadaNews KannadaShimogaShivamoggaShivamogga CorporationShivamogga Newsಇಂದಿರಾ ಕ್ಯಾಂಟೀನ್ಕೊರೋನಾಕೋವಿಡ್ಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ ಮಹಾನಗರ ಪಾಲಿಕೆಶಿವಮೊಗ್ಗ_ನ್ಯೂಸ್ಸಚಿವ ಕೆ.ಎಸ್.ಈಶ್ವರಪ್ಪ
Share197Tweet123Send
Previous Post

ಕರುನಾಡ ಮಲೆನಾಡಿನ ಮಳೆ ಹಾಡೇ ಚಂದ…

Next Post

ಚಳ್ಳಕೆರೆ: ಫ್ರಂಟ್ ಲೈನ್ ವಾರಿಯರ್ಸ್ ಪತ್ರಕರ್ತರಿಗೂ ಸುರಕ್ಷತಾ ಕಿಟ್ ನೀಡಲು ಮನವಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಚಳ್ಳಕೆರೆ: ಫ್ರಂಟ್ ಲೈನ್ ವಾರಿಯರ್ಸ್ ಪತ್ರಕರ್ತರಿಗೂ ಸುರಕ್ಷತಾ ಕಿಟ್ ನೀಡಲು ಮನವಿ

ಚಳ್ಳಕೆರೆ: ಫ್ರಂಟ್ ಲೈನ್ ವಾರಿಯರ್ಸ್ ಪತ್ರಕರ್ತರಿಗೂ ಸುರಕ್ಷತಾ ಕಿಟ್ ನೀಡಲು ಮನವಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಹುಲಿಕಲ್ ಘಾಟಿಯಲ್ಲಿ ಭಾರೀ ದುರಂತ | ಧರೆ ಕುಸಿದು ಮೂವರು ಕಾರ್ಮಿಕರ ಸಾವು

ಹುಲಿಕಲ್ ಘಾಟಿಯಲ್ಲಿ ಭಾರೀ ದುರಂತ | ಧರೆ ಕುಸಿದು ಮೂವರು ಕಾರ್ಮಿಕರ ಸಾವು

April 9, 2026
ಪಿಯುಸಿ ರಿಸಲ್ಟ್ | ಪೇಸ್ ಕಾಲೇಜಿನ ವಿದ್ಯಾರ್ಥಿನಿ ಮಹಿನ್ ರಾಜ್ಯಕ್ಕೆ 3, ಜಿಲ್ಲೆಗೆ ಪ್ರಥಮ ಸ್ಥಾನ

ಪಿಯುಸಿ ರಿಸಲ್ಟ್ | ಪೇಸ್ ಕಾಲೇಜಿನ ವಿದ್ಯಾರ್ಥಿನಿ ಮಹಿನ್ ರಾಜ್ಯಕ್ಕೆ 3, ಜಿಲ್ಲೆಗೆ ಪ್ರಥಮ ಸ್ಥಾನ

April 9, 2026
ದೇಶ ಸಮೃದ್ಧಿಯಾದಾಗ ನಾವೆಲ್ಲರೂ ಸಮೃದ್ಧಿ: ಸಂಸದ ರಾಘವೇಂದ್ರ

ದೇಶ ಸಮೃದ್ಧಿಯಾದಾಗ ನಾವೆಲ್ಲರೂ ಸಮೃದ್ಧಿ: ಸಂಸದ ರಾಘವೇಂದ್ರ

April 9, 2026
`ನಾನು ಕರುಣಾಕರ್’ ಚಿತ್ರನೋಡಿ, ಹೊಸ ಪ್ರತಿಭೆಗಳನ್ನು ಬೆಂಬಲಿಸಿ: ನಿರ್ಮಾಪಕ ನಮನ್ ನಾರಾಯಣ್ ಸಂತೋಷ್

`ನಾನು ಕರುಣಾಕರ್’ ಚಿತ್ರನೋಡಿ, ಹೊಸ ಪ್ರತಿಭೆಗಳನ್ನು ಬೆಂಬಲಿಸಿ: ನಿರ್ಮಾಪಕ ನಮನ್ ನಾರಾಯಣ್ ಸಂತೋಷ್

April 9, 2026
ಪಿಯುಸಿ ರಿಸಲ್ಟ್ | ಕುಮದ್ವತಿ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ | ಹೆಮ್ಮೆಯ ವಿದ್ಯಾರ್ಥಿಗಳಿವರು

ಪಿಯುಸಿ ರಿಸಲ್ಟ್ | ಕುಮದ್ವತಿ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ | ಹೆಮ್ಮೆಯ ವಿದ್ಯಾರ್ಥಿಗಳಿವರು

April 9, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL