ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿನಿಮಾ ಅಥವಾ ಧಾರವಾಹಿಗಳಲ್ಲಿ ನಿಮ್ಮ ಮಕ್ಕಳನ್ನು Childrens in Movie and Serial ಸೇರಿಸುವ ಇಚ್ಛೆ ನಿಮಗಿದ್ದರೆ ಇನ್ಮುಂದೆ ಜಿಲ್ಲಾಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಈ ಕುರಿತಂತೆ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯು ಪ್ರಕಟಣೆ ಹೊರಡಿಸಿದ್ದು, ಸಿನಿಮಾ ಅಥವಾ ಧಾರವಾಹಿಗಳಲ್ಲಿ ಬಾಲ ನಟ/ನಟಿಯರ ಪಾತ್ರಕ್ಕಾಗಿ ಮಕ್ಕಳನ್ನು ಬಳಸಿಕೊಳ್ಳಲು ಇಚ್ಛಿಸುವ ಸಿನಿಮಾ ನಿರ್ದೇಶಕರು, ನಿರ್ಮಾಪಕರು, ಆಯೋಜಕರು ಮೊದಲು ಬಾಲ ಹಾಗೂ ಕಿಶೋರಾ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ರ ಕರ್ನಾಟಕ ನಿಯಮಗಳ 2ಸಿ ರಲ್ಲಿ ಮಗು(1) ಕಲಂ 3ರ ನಿಬಂಧನೆಗಳ ನಿಯಮಾನುಸಾರ ಜಿಲ್ಲಾಧಿಕಾರಿಗಳ ಅನುಮತಿ ಪತ್ರ ಪಡೆಯುವುದು ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ.
ಶಿಕ್ಷಣಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಸುರಕ್ಷತೆ ಮತ್ತು ಮಕ್ಕಳ ದುರುಪಯೋಗ ತಡೆ ಕುರಿತಾದ ಮಾನ್ಯತೆ ಪಡೆದ ಮಾರ್ಗಸೂಚಿಯನ್ವಯ ಮುಚ್ಚಳಿಕೆಯನ್ನು ಆಯೋಜಕರು ನೀಡಬೇಕು ಎಂದು ಉಲ್ಲೇಖಿಸಲಾಗಿದೆ.
Also read: ಸ್ವಾತಂತ್ರ್ಯ ನಂತರ ರಾಜ್ಯಗಳಿಗೆ ಕಾಂಗ್ರೆಸ್ ಅವಧಿಯಲ್ಲಾದ ಅನ್ಯಾಯ ಬಿಚ್ಚಿಟ್ಟ ಬಸವರಾಜ ಬೊಮ್ಮಾಯಿ
ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೇ ಮಕ್ಕಳನ್ನು ಬಳಸಿಕೊಂಡಲ್ಲಿ ಕಾನೂನು ಉಲ್ಲಂಘಿಸುವ ಸಿನಿಮಾ ಹಾಗೂ ಧಾರವಾಹಿ ಆಯೋಜಕರು/ ನಿರ್ಮಾಪಕರು ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಕಾರ್ಮಿಕ ಅಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಇಲ್ಲಿದೆ ಕಂಡೀಷನ್ಸ್:
- ಯಾವುದೇ ಮಗುವನ್ನು ಒಂದು ದಿನದಲ್ಲಿ 5 ಗಂಟೆಗಳಿಗಿಂತ ಹೆಚ್ಚಿನ ಅವಧಿಗೆ ನಟನಾ ಕೆಲಸಕ್ಕೆ ನಿಯೋಜಿಸುವಂತಿಲ್ಲ
- ವಿಶ್ರಾಂತಿ ಇಲ್ಲದೆ 3 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿಸುವಂತಿಲ್ಲ
- ಮಕ್ಕಳನ್ನು 27 ದಿನಗಳಿಗಿಂತ ಹೆಚ್ಚಿನ ದಿನಗಳು ನಟನಾ ಕೆಲಸದಲ್ಲಿ ತೊಡಗಲು ಅವಕಾಶವಿಲ್ಲ
- ಮಗುವಿನ ರಕ್ಷಣೆಗೆ ಪ್ರತಿ 5 ಮಕ್ಕಳಿಗೆ ಒಬ್ಬರಂತೆ ಜವಾಬ್ದಾರಿ ವ್ಯಕ್ತಿಯನ್ನು ನೇಮಿಸಬೇಕು
- ಕಾರ್ಯಕ್ರಮದಿಂದ ಬರುವ ಆದಾಯದಲ್ಲಿ ಕನಿಷ್ಠ ಶೇ.20ರಷ್ಟು ಮಗುವಿನ ಹೆಸರಿಗೆ ನಿಶ್ಚಿತ ಠೇವಣಿ ಇಡಬೇಕು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post