ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಟನಂ ಬಾಲನಾಟ್ಯ ಕೇಂದ್ರದ ಅಧ್ಯಕ್ಷ ಹಾಗೂ ಕರ್ನಾಟಕ ಕಲಾ ಶ್ರೀ ವಿದ್ವಾನ್ ಎಸ್. ಕೇಶವಕುಮಾರ್ ಫಿಳೈ ಅವರಿಗೆ ಕೊಲ್ಕತ್ತಾದ ವೆಸ್ಟ್ ಬೆಂಗಾಲ್‍ನ ಹಿಂದೂಸ್ತಾನ್ ಆಟ್ರ್ಸ್ ಮತ್ತು ಮ್ಯೂಸಿಕ್ ಸೊಸೈಟಿರವರು ಭರತನಾಟ್ಯ ಕಲಾ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿದ್ವಾನ್ ಎಸ್.ಕೇಶವಕುಮಾರ್ ಫಿಳೈ ಮಾಹಿತಿ ನೀಡಿ, 38 ವರ್ಷಗಳಿಂದ ನಮ್ಮ ಕೇಂದ್ರದಿಂದ ಭರತನಾಟ್ಯವನ್ನು ಕಲಿಸುತ್ತಿದ್ದೇವೆ. ಸಾವಿರಾರು ಮಕ್ಕಳು ನಮ್ಮ ಸಂಸ್ಥೆಯಲ್ಲಿ ಕಲಿತು ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ನನ್ನ 38 ವರ್ಷದ ಈ ಸೇವೆಯನ್ನು ಗುರುತಿಸಿ ಮ್ಯೂಸಿಕ್ ಸೊಸೈಟಿಯವರು ಡಾಕ್ಟರೇಟ್ ಪದವಿ ನೀಡಿರುವುದು ನನಗೆ ಸಂತಸ ತಂದಿದೆ ಎಂದರು.
ಮೇ 26ರಂದು ದುಬೈನಲ್ಲಿರುವ ಚಲ್ಡ್ರನ್ ಸಿಟಿ ಅಲ್ ಅಜಿಯಾಲ್ ರಂಗಮಂದಿರದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗಣ್ಯರಾದ ಆಶೀಶ್‍ಕುಮಾರ್ ಸರ್ಕಾರ್, ಬಿಜೇಂದ್ರ ಸಿಂಗ್, ಟುಡು ಮಮು, ಸುದೀಂದ್ರ ಕುಮಾರ್, ಪಂಡಿತ್ ಪರಸನ್ನಜಿತ್ ಪೋದಾರ್ ಮುಂತಾದವರು ಹಾಜರಿದ್ದು ನನಗೆ ಅಭಿನಂದನೆ ಸಲ್ಲಿಸಿದರು ಎಂದರು.
Also read: ಗ್ಯಾರಂಟಿ ಯೋಜನೆಗಳ ಬಗ್ಗೆ ಸಚಿವ ಮಧು ಬಂಗಾರಪ್ಪ ಮಹತ್ವದ ಹೇಳಿಕೆ
ನಟನಂ ಬಾಲನಾಟ್ಯ ಕೇಂದ್ರವು ಭಾರತೀಯ ಸಂಸ್ಕøತಿಯ ಉಳಿಸುವ ನಿಟ್ಟಿನಂತ ಸಾಗುತ್ತ ಬಂದಿದ್ದು, ಭರತನಾಟ್ಯವನ್ನು ಮುಂದಿನ ಪೀಳಿಗೆಗೂ ಉಳಿಸುವ ಕೆಲಸವನ್ನು ಮಾಡುತ್ತಿದೆ. ಇದರ ಜೊತೆಗೆ ಜಾನಪದ ನೃತ್ಯಗಳಿಗೂ ಆದÀ್ಯತೆ ನೀಡುತ್ತಿದೆ. ಅಷ್ಟೇ ಅಲ್ಲದೆ, ಪರಿಸರದ ಬಗ್ಗೆ ಕಾಳಜಿ, ಆರೋಗ್ಯ ಕಾರ್ಯಕ್ರಮಗಳು ಸೇರಿದಂತೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬಂದಿದೆ. ಹೊರ ರಾಜ್ಯ ಮತ್ತು ಹೊರದೇಶಗಳಲ್ಲಿ ಕಾರ್ಯಕ್ರಮ ನೀಡಿರುವುದು ನಮ್ಮ ಹೆಮ್ಮೆಯಾಗಿದೆ. ದಿ.ಎಸ್.ಬಂಗಾರಪ್ಪ, ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ, ದಿ.ಅಟಲ್‍ಬಿಹಾರಿ ವಾಜಪೇಯಿ, ಮಾಜಿ ಸಚಿವೆ ರಾಣಿ ಸತೀಶ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಡಾ.ಮುರುಳಿ ಮನೋಹರ್ ಜೋಷಿ, ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮಗಳನ್ನು ನೀಡಿದ ಹೆಮ್ಮೆ ನಮ್ಮದಾಗಿದೆ ಎಂದರು.
ಕೇವಲ ನಮ್ಮ ಕೇಂದ್ರದಲ್ಲಿ ಕಲಿಯುವ ಮಕ್ಕಳಿಗಲ್ಲದೆ, ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯಗಳು, ರಿಮ್ಯಾಂಡ್ ಹೋಂ, ಕಾರಾಗೃಹದ ಖೈದಿಗಳಿಗೆ, ಆಶಾಕಿರಣ ಬುದ್ಧಿಮಾನ್ಯ ಮಕ್ಕಳ ಶಾಲೆ, ವೃದ್ಧಶ್ರಮ, ಅನಾಥಶ್ರಮ ಹೀಗೆ ವಿವಿಧ ಕಡೆಗಳಲ್ಲಿ ಉಚಿತವಾಗಿ ಭರತನಾಟ್ಯವನ್ನು ಕಲಿಸಿದ್ದೇವೆ. ಈ ಎಲ್ಲಾ ಹಿನ್ನಲೆಯನ್ನು ಗಮನಿಸಿ ಈ ಪ್ರಶಸ್ತಿ ಬಂದಿರುವುದು ನನಗೂ ಮತ್ತು ನಮ್ಮ ಸಂಸ್ಥೆಗೂ ಹೆಮ್ಮೆಯಾಗಿದೆ. ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಿದ, ಈಗ ಭರತನಾಟ್ಯ ಹೇಳಿಕೊಡುತ್ತಿರುವ ಎಲ್ಲಾ ಶಿಕ್ಷಕರಿಗೂ, ಪ್ರೋತ್ಸಾಹ ನೀಡುತ್ತಿರುವ ಪೋಷಕರಿಗೂ, ನನ್ನ ಆತ್ಮೀಯರಿಗೂ, ಅವಕಾಶ ಮಾಡಿಕೊಟ್ಟ ಎಲ್ಲಾ ಗಣ್ಯರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್.ಶೇಖರ್,ಕುಮಾರಸ್ವಾಮಿ, ಚೇತನ್, ನಾಟ್ಯಶ್ರೀ, ವಂದನಾ, ಕಣ್ಣಗಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post