ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಹೆಲ್ತ್-ಕೇರ್ ಎಂಪ್ಲಾಯಿಸ್ ಅಸೋಸಿಯೇಶನ್ Shivamogga Health Care Employees Association ಆಯೋಜಿಸಿರುವ ಡಾಕ್ಟರ್ಸ್ ಕಪ್-೮ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಮಾರ್ಚ್ 20ರಂದು ನಡೆಯಲಿದೆ.
ಅಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೂ ಕೃಷಿ ಕಾಲೇಜು ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯಾವಳಿ Cricket tournament ನಡೆಯಲಿದೆ. ಪ್ರತಿವರ್ಷವೂ ಈ ಪಂದ್ಯಾವಳಿಯನ್ನು ಆಯೋಜನೆ ಮಾಡುತ್ತಿರುವ ಶಿವಮೊಗ್ಗ ಹೆಲ್ತ್-ಕೇರ್ ಎಂಪ್ಲಾಯಿಸ್ ಅಸೋಸಿಯೇಶನ್ ಈ ಬಾರಿಯೂ ಸಹ ಇದನ್ನು ನಡೆಸುತ್ತಿದ್ದು, ಸಮಾಜದ ಇತರೆ ಕ್ಷೇತ್ರಗಳಿಗೆ ಮಾದರಿಯಾಗಿದೆ.
ಪಂದ್ಯಾವಳಿಯಲ್ಲಿ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮಲ್ನಾಡ್ ಹೈಟೆಕ್ ಡಯಾಗ್ನೋಸ್ಟಿಕ್ ಸೆಂಟರ್, ಮೆಟ್ರೋ ಯುನೈಟೆಡ್ ಹೆಲ್ತ್’ಕೇರ್, ಎನ್’ಯು ಹಾಸ್ಟಿಟಲ್, ಸುಬ್ಬಯ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಸುಬ್ಬಯ್ಯ ಆಸ್ಪತ್ರೆ, ಸೆಕ್ಯೂರ್ ಆಸ್ಪತ್ರೆ, ಬಾಪೂಜಿ ಆರ್ಯುವೇದ ಕಾಲೇಜು, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಗುತ್ತಿ ಮಲ್ನಾಡ್ ಆಸ್ಪತ್ರೆ, ಆರಾಧನ ಆರ್ಥೋಪೆಡಿಕ್ ಆಸ್ಪತ್ರೆ, ಸರ್ಜಿ ಆಸ್ಪತ್ರೆ, ಅಶೋಕ ಸಂಜೀವಿನಿ, ನಂಜಪ್ಪ ಆಸ್ಪತ್ರೆ, ಸಿಮ್ಸ್ ಶಿವಮೊಗ್ಗ, ಐಎಂಎ ಶಿವಮೊಗ್ಗ, ಭಾರತ್ ನ್ಯೂರೋ ಆಸ್ಪತ್ರೆ, ಏಂಜಲ್ಸ್ ಹಾಸ್ಪಿಟಲ್ ಸಂಸ್ಥೆಗಳು ಪಾಲ್ಗೊಳ್ಳಿವೆ.
Also read: ಸಂಸ್ಕೃತ ಅಧ್ಯಯನದಿಂದ ಸಾತ್ವಿಕ ಗುಣ ಕಲಿಯಲು ಸಾಧ್ಯ: ಪ್ರೊ. ವೀರಭದ್ರಪ್ಪ ಅಭಿಪ್ರಾಯ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post