ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಆರ್‌ಎಂಎಲ್ ನಗರದಲ್ಲಿ ಮಗುವಿನ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಇತ್ತೀಚೆಗೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದು, ಇದಕ್ಕೆ ನಿದರ್ಶನವಾಗಿ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಆರ್‌ಎಂಎಲ್ ನಗರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಮನೆಯಿಂದ ಹೊರ ಬರುವ ವರ್ಷದೊಳಗಿನ ಮಗುವೊಂದನ್ನ ನಾಯಿಯೊಂದು ಆಕೆಯ ಲಂಗವನ್ನು ಕಚ್ಚಿ ಕೆಳಗೆ ಬೀಳಿಸಿ ದಾಳಿ ನಡೆಸಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.
ರಾಜು ಮತ್ತು ಲಕ್ಷ್ಮೀ ಎಂಬ ದಂಪತಿಯ ಪುತ್ರಿ ಯಾದವಿ ಎರಡು ದಿನಗಳ ಹಿಂದೆ ಅತ್ತೆ ಮನೆಗೆ ಬಂದಿದ್ದಳು. ಬೀದಿ ನಾಯಿಯ ದಾಳಿಗೆ ಮಗುವಿನ ಕೈಗೆ ಗಾಯಗಳಾಗಿವೆ. ಆಕೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post