ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ ವತಿಯಿಂದ ಕೊರೋನಾ ಸೋಂಕಿತರ ಜೀವ ಉಳಿಸುವ ಸಾಧನಗಳಾದ 16 ಲಕ್ಷ ರೂ. ಮೌಲ್ಯದ ವೆಂಟಿಲೇಟರ್ ಹಾಗೂ 2ಲಕ್ಷ ರೂ.ಮೌಲ್ಯದ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಹಾಗೂ ಇತರೆ ಪರಿಕರಗಳನ್ನು ಶಿವಮೊಗ್ಗ ಜಿಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸಿದ್ದಪ್ಪ ಅವರಿಗೆ ಐಆರ್‌ಸಿಎಸ್ ಜಿಲ್ಲಾ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಶಿವಕುಮಾರ ಹಸ್ತಾಂತರಿಸಿದರು.

ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆ ಐಆರ್‌ಸಿಎಸ್ ಸಭಾಪತಿ ಎಸ್.ಪಿ. ದಿನೇಶ್, ರಾಜ್ಯ ರೆಡ್‌ಕ್ರಾಸ್ ಉಪ ಸಭಾಪತಿ ಡಾ. ವಿಎಲ್‌ಎಸ್ ಕುಮಾರ್, ಜಿಲ್ಲಾ ಪಂಚಾಯತ್ ಸಿಇಓ ವೈಶಾಲಿ, ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಡಾ. ದಿನೇಶ್‌ಮತ್ತು ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















