ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗುಡ್ಲಕ್ ಅರೈಕೆ ಕೇಂದ್ರದಲ್ಲಿರುವ ಅನಾಥರಿಗೆ, ಪಾರ್ಶ್ವವಾಯು ಪೀಡಿತರಿಗೆ ಮತ್ತು ಬುಧ್ದಿಮಾಂದ್ಯರಿಗೆ ಉಚಿತ ಸೇವೆಯನ್ನು ಕಳೆದ ಹಲವಾರು ವರ್ಷದಿಂದ ನೀಡುತ್ತಿರುವುದು ಸದಾ ಸ್ಮರಣೀಯ ಹಾಗೂ ಅನುಕರಣೀಯ ಇದನ್ನು ಎಲ್ಲರೂ ಅಳವಡಿಸಿಕೊಂಡಲ್ಲಿ ಸಮಾಜದ ಬೆಳವಣಿಗೆ ಸಾಧ್ಯ ಎಂದು ರೋಟರಿ ಕ್ಲಬ್ ಶಿವಮೊಗ್ಗ ಜೂಬಲಿ Rotary Club Shivamogga Jublee ನೂತನ ಅಧ್ಯಕ್ಷ ಸುರೇಶ ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಜೂಬಲಿಯಿಂದ ಹಸಿದವರಿಗೆ ಅಹಾರ ನೀಡುವ ಸಂಕಲ್ಪ ದಿನದ ಸಂದರ್ಭದಲ್ಲಿ ಚೊಚ್ಚಲ ಕಾರ್ಯಕ್ರಮವಾಗಿ ವ್ರದ್ದರ ಅಶ್ರಯತಾಣ ಗುಡ್ ಲಕ್ ಅರೈಕೆ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಪಲಾನುಭವಿಗಳ ಯೊಗಕ್ಷೇಮ ವಿಚಾರಿಸಿದರು. ಹಾಗೂ ಅನ್ನಪೂರ್ಣೇಶ್ವರಿ ನಿಧಿಗೆ ದೇಣಿಗೆ ಮತ್ತು ಹಣ್ಣು ಹಂಪಲು ನೀಡಿ ಈ ವರ್ಷದ ಸೇವಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂಗವಿಕಲರ, ಬುಧ್ದಿಮಾಂದ್ಯರ ಸೇವೆ ದೇವರ ಸೇವೆಗೆ ಸಮ. ಅಸಹಾಯಕರಿಗೆ ಸಾಂತ್ವನ ನೀಡುವುದು ರೋಟರಿಯ ಮಂತ್ರ ಎಂಬಂತೆ ಪ್ರಪಂಚದಾದ್ಯಂತ ಕೊರೋನಾ ಮಹಾಮಾರಿ ಬಂದಾಗ ಸಾವಿರಾರು ಜನರನ್ನು ಸಾವಿನ ದವಡೆಯಿಂದ ಪಾರುಮಾಡಿದ ಸಂಸ್ಥೆ ರೋಟರಿ. ವೃತ್ತಿ ಜೊತೆಗೆ ಸಮಾಜ ಸೇವೆ ರೋಟರಿ ಸದಸ್ಯರ ವಿಶೇಷತೆ. ಇಂತವರನ್ನು ಪ್ರೀತಿಸುವ ದಿನಾಚರಣೆಯನ್ನು ವರ್ಷದ 365 ದಿನ ಆಚರಿಸಬೇಕೆಂದು ತಿಳಿಸಿದರು.
Also read: ಶಿವಮೊಗ್ಗ: ಜು.3ರಂದು ಪದಬಂಧ ಸ್ಪರ್ಧೆ
ಈ ಕಾರ್ಯಕ್ರಮದಲ್ಲಿ ಜಿ. ವಿಜಯಕುಮಾರ್, ಅರೈಕೆ ಕೇಂದ್ರದ ಅಧ್ಯಕ್ಷರಾದ ರವೀಂದ್ರನಾಥ ಐತಾಳ, ರೋಟರಿ ಜೂಬಲಿಯ ಮಾಜಿ ಅಧ್ಯಕ್ಷರಾದ ರೇವಣ್ಣಸಿದ್ದಪ್ಪ, ಅಶ್ವಥ್, ಸುರೇಂದ್ರ, ಉಮಾ, ಲಕ್ಮೀನಾರಾಯಣ , ಕಾರ್ಯದರ್ಶಿ ವೆಂಕಟೇಶ ಎಸ್ ಗುತ್ತಲ್, ಆರೈಕೆ ಕೇಂದ್ರದ ಪಂಚಾಕ್ಷರಿ ಹಿರೇಮಠ ಮತ್ತು ಶಿವಪ್ಪಗೌಡರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post