ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯಾರು ಏನಾದರೂ ಟೀಕೆಗಳನ್ನು ಮಾಡಿಕೊಂಡರೂ ನಾವು ತಲೆಕೆಡಿಸಿಕೊಳ್ಳಲ್ಲ. ನಮ್ಮ ಸಾಧನೆ ಹಾಗೂ ಕೆಲಸಗಳನ್ನು ಮುಂದಿಟ್ಟು ಮತ ಕೇಳುತ್ತೇವೆ ಎಂದು ಸಂಸದ ಬಿ.ವೈ. ರಾಘವೇಂದ್ರ #B Y Raghavendra ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಕಳೆದ 5 ವರ್ಷಗಳಲ್ಲಿ ಮಾಡಲಾಗಿರುವ ಕೆಲಸಗಳು, ಮೋದಿ ಸರ್ಕಾರದ 10 ವರ್ಷದ ಸಾಧನೆಗಳನ್ನು ಮುಂದಿಟ್ಟುಕೊಂಡು ನಾವು ಮತ ಕೇಳುತ್ತೇವೆ. ಯಾರು ಏನಾದರೂ ಟೀಕೆ ಟಿಪ್ಪಣಿ ಮಾಡಿಕೊಳ್ಳಲಿ. ನಾವು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

Also read: ಶಿಕಾರಿಪುರ | ರಾಘವೇಂದ್ರ-ವಿಜಯೇಂದ್ರ ಜಂಟಿ ಪ್ರಚಾರದ ಭರಾಟೆ
ನಮ್ಮ ನಾಯಕರು ಹಾಗೂ ಕಾರ್ಯಕರ್ತರು ನಿರಂತರವಾಗಿ ಶ್ರಮಿಸುತ್ತಿದ್ದು, ಮೋದಿ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ, ತಾಯಂದಿರಿಗೆ ತಿಳಿಸಿ, ಮನವೊಲಿಸುವ ಕೆಲಸವನ್ನು ಬೂತ್ ಮಟ್ಟದಲ್ಲಿ ಮಾಡಲಾಗುತ್ತಿದೆ ಎಂದರು.

ಮೋದಿಯವರ ನೇತೃತ್ವದ ಎನ್’ಡಿಎ ಸರ್ಕಾರ ಮತ್ತೆ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಮರಳಲಿದೆ ಎಂದು ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್ ಅವರೇ ಹೇಳಿರುವುದು ಸ್ವಾಗತಾಹ ಸಂಗತಿಯಾಗಿದೆ ಎಂದರು.
ನಾವು ಅಧಿಕಾರಕ್ಕೆ ಮತ್ತೆ ಬರುವುದು ನಿಶ್ಚಿತವಾಗಿದ್ದು, ಎಷ್ಟು ಹೆಚ್ಚು ಸ್ಥಾನಗಳನ್ನು ಗಳಿಸುತ್ತೇವೆ ಎನ್ನುವುದು ಮಾತ್ರ ಗಮನಹರಿಸಬೇಕಿದೆ ಎಂದರು.

ರಾಜ್ಯಾಧ್ಯಕ್ಷರಾಗಿ ಎಷ್ಟೇ ಕೆಲಸಗಳಿದ್ದರೂ ಕ್ಷೇತ್ರಕ್ಕೆ ಬಂದು 15-16 ಸಭೆಗಳನ್ನು ನಡೆಸುತ್ತಿದ್ದಾರೆ. ಎಲ್ಲ ಸಮುದಾಯದವರ ಪಕ್ಷ ಸೇರ್ಪಡೆ ಹಾಗೂ ಬೆಂಬಲ ನಮಗೆ ಮತ್ತಷ್ಟು ಬಲ ನೀಡಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post