ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಂತರಾಜ್ ಆಯೋಗದ ಅವೈಜ್ಞಾನಿಕ ಜಾತಿಗಣತಿಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು ಎಂದು ಶ್ರೀಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂತರಾಜ್ ಆಯೋಗದ ವರದಿ ಸಿದ್ಧವಾಗಿದೆ. ಈಗಾಗಲೇ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ಧಿಯಂತೆ ನಮ್ಮ ಸಮುದಾಯದ ಸಂಖ್ಯೆಯನ್ನು ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂದು ತೋರಿಸಲಾಗುತ್ತಿದೆ. ಆದರೆ ಇವೆರೆಡು ಒಂದೇಯಾಗಿವೆ. ಈ ವರದಿ ಸುಮಾರು 10 ವರ್ಷಗಳಷ್ಟು ಹಳೇಯದೇ ಆಗಿದ್ದು, ಮತ್ತು ಅವೈಜ್ಞಾನಿಕವಾಗಿದೆ. ಈಗ ಇದನ್ನು ಬಿಡುಗಡೆ ಮಾಡುವ ಅವಶ್ಯಕತೆ ಇಲ್ಲ ಎಂದರು.
ಮಾಧ್ಯಮಗಳಲ್ಲಿ ಬಂದಿರುವ ವರದಿಯಂತೆ ನಮ್ಮ ಜನಸಂಖ್ಯೆ ತುಂಬ ಕಡಿಮೆಯನ್ನು ತೋರಿಸಲಾಗಿದೆ. ನಾವು ರಾಜ್ಯದಲ್ಲಿ ಸುಮಾರು ೨ ಕೋಟಿ ಜನರಿದ್ದೇವೆ. ಆದರೆ ಈ ಸಂಖ್ಯೆ ತಪ್ಪಾಗಿದ್ದು, ಕೇವಲ 75 ಲಕ್ಷ ಎಂದು ಹೇಳಲಾಗುತ್ತಿದೆ. ಇದು ಸರಿಯಲ್ಲ ಆದ್ದರಿಂದ ಯಾವುದೇ ಕಾರಣಕ್ಕೂ ಸರ್ಕಾರ ಈ ವರದಿಯನ್ನು ಜಾರಿ ಮಾಡಬಾರದು ಎಂದು ಆಗ್ರಹಿಸಿದರು.
ಸಮಾಜದ ಮುಖಂಡ ಮಹಾರುದ್ರ ಮಾತನಾಡಿ, ಅವೈಜ್ಞಾನಿಕವಾಗಿರುವ ಈ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚೆ ಕೂಡ ಮಾಡಬಾರದು. ವರದಿಯೇ ಅಪೂರ್ಣವಾಗಿರುವಾಗ ಅವೈಜ್ಞಾನಿಕವಾಗಿರುವವಾಗ ಹೇಗೆ ಇದನ್ನು ಜಾರಿ ಮಾಡಲು ಸಾಧ್ಯ. ಒಂದು ಪಕ್ಷ ಜಾರಿ ಹೊರಟಿದ್ದೇ ಆದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಪಕ್ಷಾತೀತವಾಗಿ ಮಾಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹೆಚ್.ಶಾಂತ ಆನಂದ್, ಬಳ್ಳಕೆರೆ ಸಂತೋಷ್, ಅನಿತಾ ರವಿಶಂಕರ್, ರೇಣುಕಾರಾಧ್ಯ, ಕಾಯಕಯೋಗಿ ಚನ್ನಬಸಪ್ಪ, ಪಿ.ರುದ್ರೇಶ್, ಬೆನಕಪ್ಪ, ಸಿ.ಮಹೇಶ್ ಮೂರ್ತಿ, ಗಂಗಾಧರ್, ಚಟ್ನಳ್ಳಿ ರುದ್ರೇಶ್, ಮೂರ್ತಿ, ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post