ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಡಾಂಬಿಕ ಆಕರ್ಷಣೆಗಳಿಗೆ ಒಳಗಾಗಿ ಆನ್’ಲೈನ್ ಎಂಬ ಅಂಧತ್ವದಲ್ಲಿ ಮುಳಗಿ ಮೋಸ ಹೋಗದಿರಿ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಹೇಳಿದರು.
ಗುರುವಾರ ನಗರದ ಜೆಎನ್’ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ #JNNCE ಭಾರತ ಸರ್ಕಾರದ ರಾಷ್ಟ್ರೀಯ ಸೈಬರ್ ಭದ್ರತಾ ಸಂಶೋಧನಾ ಮಂಡಳಿಯು ನೂತನವಾಗಿ ಸ್ಥಾಪಿಸಿರುವ ರಾಷ್ಟ್ರೀಯ ಸೈಬರ್ ಸಂಪನ್ಮೂಲ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

Also read: ಮೈಸೂರು | ಸೋಸಲೆ ಶ್ರೀವಿದ್ಯಾಶ್ರೀಶ ತೀರ್ಥ ಶ್ರೀಗಳ 8ನೇ ಚಾತುರ್ಮಾಸ್ಯ ವ್ರತ ದಿನಾಂಕ ನಿಗದಿ
ಮಾನವೀಯ ಸಂಬಂಧಗಳು ಆನ್’ಲೈನ್’ನಲ್ಲಿ ಮುಳುಗಿದೆ. ಪಕ್ಕದ ಮನೆಯವರ ಪರಿಚಯವೇ ಇಲ್ಲದಂತೆ ಬದುಕುತ್ತಿದ್ದೇವೆ. ಹಳ್ಳಿಗಳು ಸಹ ಅಂತಹ ಜಾಲತಾಣಗಳಲ್ಲಿಯೇ ಮುಳುಗುತ್ತಿರುವುದು ವಿಷಾದನೀಯ. ಮಾನವೀಯ ಮೌಲ್ಯಗಳು ಎಂಬುದು ಆಧುನಿಕ ತಾಂತ್ರಿಕತೆಗೆ ಮೀರಿದ್ದು ಎಂಬ ಜಾಗೃತಿ ನಮ್ಮೆಲ್ಲರದಾಗಬೇಕಿದೆ ಎಂದು ಹೇಳಿದರು.

ರಾಷ್ಟ್ರೀಯ ಸೈಬರ್ ಭದ್ರತಾ ಸಂಶೋಧನಾ ಮಂಡಳಿಯ ಕಾರ್ಪೊರೇಟ್ ಮತ್ತು ಸಾರ್ವಜನಿಕ ವಲಯದ ಕಾರ್ಯನಿರ್ವಾಹಕ ನಿರ್ದೇಶಕ ಜಿ.ಅನಿರುದ್ದ ಬಾಲಾಜಿ ಮಾತನಾಡಿ, ಸೈಬರ್ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ನಾವೀನ್ಯಯುತ ಚಿಂತನೆಗೆ ಸೈಬರ್ ಸಂಪನ್ಮೂಲ ಕೇಂದ್ರ ಪೂರಕವಾಗಿದೆ. ಗೌಪ್ಯ ಮಾಹಿತಿಗಳಿಗೆ ಪಾಸ್ ವರ್ಡ್ ನೀಡುವುದರಿಂದ ಪ್ರಾರಂಭವಾಗಿ ಡಿಜಿಟಲಿಕರಣದ ಅನೇಕ ಆವಿಷ್ಕಾರಗಳಿಗೆ ಸೈಬರ್ ಭದ್ರತಾ ಕ್ಷೇತ್ರ ಸಾಕ್ಷಿಯಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಸೈಬರ್ ಭದ್ರತಾ ಸಂಶೋಧನಾ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಗೋಪಿಕೃಷ್ಣ, ತಾಂತ್ರಿಕ ಮುಖ್ಯಸ್ಥರಾದ ಡಾ.ಸತ್ಯಶೀಲಾ ಷಣ್ಮುಗಂ, ತಾಂತ್ರಿಕ ಸಂಯೋಜಕರಾದ ಕೌಶಿಕ್, ರಾಮಪ್ರಸಾದ್, ಸಹ ಪ್ರಾಧ್ಯಾಪಕಿ ಡಾ.ಜೆ.ಪಿ. ಅಶ್ವಿನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post