ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತ ಸರ್ಕಾರದ ಪ್ರಮುಖ ವಿಭಾಗಗಳಲ್ಲೊಂದಾದ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ(ಪಿಐಬಿ) #PIB ನವದೆಹಲಿಯ ನೂತನ ನಿರ್ದೇಶಕರಾಗಿ ಡಾ.ಡಿ.ಜಿ. ಹಳ್ಳಿಕೇರಿ ಅವರು ಇತ್ತೀಚೆಗೆ ಅಧಿಕಾರ ವಹಿಸಿಕೊಂಡರು.
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧೀನದಲ್ಲಿರುವ ಈ ವಿಭಾಗವು ಸರ್ಕಾರ ಹಾಗೂ ಮಾಧ್ಯಮಗಳ ನಡುವೆ ಮಹತ್ವದ ಕೊಂಡಿಯಾಗಿ ಕೆಲಸ ನಿರ್ವಹಿಸುವ ವಿಭಾಗ ಇದಾಗಿದೆ.
Also read: ರೇಣುಕಾಸ್ವಾಮಿ ಕೊಲೆ ಕೇಸ್| ಶಿವಮೊಗ್ಗ ಜೈಲಿನಿಂದ ಲಕ್ಷ್ಮಣ್ ರಿಲೀಸ್!
ಸರ್ಕಾರದ ನೀತಿ, ನಿರೂಪಣೆ, ಸರ್ಕಾರದ ಸಾಧನೆಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ ಮೊದಲಾದ ಪ್ರಮುಖ ಅಂಶಗಳನ್ನು ಮುದ್ರಣ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮದವರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಈ ವಿಭಾಗದ್ದಾಗಿದೆ.
ಈ ಮೊದಲು ಅವರು ಆಕಾಶವಾಣಿ ಧಾರವಾಡ, ಬೆಂಗಳೂರು ನಿಲಯಗಳಲ್ಲಿ ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಲ್ಲದೆ ನವದೆಹಲಿಯ ಬಾತ್ಮೀದಾರರಾಗಿಯೂ ಸೇವೆ ಸಲ್ಲಿಸಿದವರು.
ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ಇಲಾಖೆ, ಸೆಂಟ್ರಲ್ ಬ್ಯೂರೋ ಆಪ್ ಕಮ್ಯೂನಿಕೇಷನ್ (ಸಿಐಬಿ)ಯಲ್ಲಿ ಬಳ್ಳಾರಿ, ಚಿತ್ರದುರ್ಗದಲ್ಲಿ ಕರ್ತವ್ಯ ನಿರ್ವಹಿಸಿ ಶಿವಮೊಗ್ಗ, ದಾವಣಗೆರೆ ಪ್ರಭಾರಿಯಾಗಿಯೂ ಕೆಲಸ ನಿರ್ವಹಿಸಿದ ಅನುಭವವುಳ್ಳವರಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post