ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸುಬ್ಬಯ್ಯ ಆಸ್ಪತ್ರೆ ಸಮೂಹ ಸಂಸ್ಥೆಗಳ ಸಂಸ್ಥಾಪಕ ದಿ.ಟಿ. ಸುಬ್ಬರಾಮಯ್ಯ ಅವರ ಸವಿನೆನಪಿನಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಯಶಸ್ವಿಯಾಯಿತು.
ಸುಬ್ಬಯ್ಯ ವೈದ್ಯಕೀಯ ಕಾಲೇಜು, ಆಸ್ಪತ್ರೆ ರಕ್ತನಿಧಿ, ಸಮೂಹ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
Also read: ಈಶ್ವರಪ್ಪರಿಗೆ ಮತ್ತೊಂದು ಸಂಕಷ್ಟ | ಕೋಟೆ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲು
ಮ್ಯಾಕ್ಸ್ ಆಸ್ಪತ್ರೆಯ ಮುಖ್ಯಸ್ಥ, ಸುಬ್ಬಯ್ಯ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ ಅವರು ತಮ್ಮ ತಂದೆಯ ನೆನಪಿನಲ್ಲಿ ಸ್ವತಃ ರಕ್ತದಾನ ಮಾಡುವ ಮೂಲಕ ಮಾದರಿಯಾದರು.
ಈ ವೇಳೆ ಮಾತನಾಡಿದ ಡಾ.ಎಸ್. ನಾಗೇಂದ್ರ, ಪುರುಷರಲ್ಲಿ ಪ್ರತಿ 01 ಕಿಲೋ ಗ್ರಾಂ ದೇಹದ ತೂಕಕ್ಕೆ 76 ಮಿಲೀ ಮತ್ತು ಮಹಿಳೆಯರಲ್ಲಿ ಪ್ರತಿ 01 ಕಿಲೋ ಗ್ರಾಂ ದೇಹದ ತೂಕಕ್ಕೆ 66 ಮಿಲೀನಷ್ಟು ರಕ್ತ ಇರುತ್ತದೆ. ಪ್ರತಿ 01 ಕಿಲೋ ಗ್ರಾಂ ನ ದೇಹದ ತೂಕಕ್ಕೆ ಕೇವಲ 8 ಮಿಲೀನಂತೆ ಒಂದು ಬಾರಿಗೆ ಗರಿಷ್ಟ 450 ಮಿಲೀನಷ್ಟು ರಕ್ತವನ್ನು ಮಾತ್ರ ಪಡೆಯಲಾಗುವುದು ಎಂದರು.
ರಕ್ತದಾನ ಮಾಡಿದ 48 ಗಂಟೆಗಳ ಒಳಗೆ ರಕ್ತದಲ್ಲಿನ ದ್ರವಾಂಶವು ಉತ್ಪತ್ತಿಯಾಗುವುದು. ದೇಹದಲ್ಲಿ ಕೆಂಪು ರಕ್ತಕಣಗಳ ಸರಾಸರಿ ಜೀವಿತಾವಧಿಯು 120 ದಿನಗಳಾಗಿರುತ್ತವೆ. ರಕ್ತದಾನ ಮಾಡದಿದ್ದರೂ ಸಹಾ ಕಣಗಳು ನೈಸರ್ಗಿಕವಾಗಿ ಸಾಯುತ್ತವೆ. ಹಾಗಾಗಿ ಈ ಕಣಗಳು ಸಾಯುವ ಮುನ್ನ ರಕ್ತದಾನ ಮಾಡುವುದರಿಂದ, ಬೇರೊಬ್ಬರ ಜೀವವನ್ನು ಉಳಿಸಿದ ತೃಪ್ತಿ ಹೊಂದಬಹುದು. ರಕ್ತದಾನ ಮಾಡಿ ರಕ್ತದ ಅಲಭ್ಯತೆಯಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟಿ ಎಂದು ಕರೆ ನೀಡಿದರು.
ರಕ್ತದಾನ ಶಿಬಿರದಲ್ಲಿ ಮ್ಯಾಕ್ಸ್ ಆಸ್ಪತ್ರೆ, ಸುಬ್ಬಯ್ಯ ವೈದ್ಯಕೀಯ ಕಾಲೇಜು ಸೇರಿದಂತೆ ತಡಿಕೆಲ ಸುಬ್ಬಯ್ಯ ಟ್ರಸ್ಟ್ ಅಡಿಯ ವಿವಿಧ ಸಂಸ್ಥೆಗಳ ವೈದ್ಯರು ಹಾಗೂ ಸಿಬ್ಬಂದಿಗಳು ರಕ್ತದಾನ ಮಾಡಿದರು.
ಮ್ಯಾಕ್ಸ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ನಾರಾಯಣ ಪಂಜಿ, ಪ್ರಮುಖರಾದ ಡಾ.ವಿನಯ ಶ್ರೀನಿವಾಸ್ ಹಾಗೂ ಮ್ಯಾಕ್ಸ್ ಆಸ್ಪತ್ರೆಯ ಎಲ್ಲ ವೈದ್ಯರು, ಸಿಬ್ಬಂದಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post