ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ PESITM ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಎಂಟ್ಯುಪಲ್ ಟೆಕ್ನಾಲಜೀಸ್ ಸಹಯೋಗದಲ್ಲಿ ಆಗಸ್ಟ್ 17ರಿಂದ 22ರವರೆಗೆ “ಡಿಸೈನ್ ಆಫ್ ಅನಲಾಗ್ ಮತ್ತು ಡಿಜಿಟಲ್ ಐಸಿ ಯೂಸಿಂಗ್ ಕ್ಯಾಡೆನ್ಸ್ ಟೂಲ್ಸ್” ಕುರಿತು ಐದು ದಿನಗಳ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂ (ಎಫ್‌ಡಿಪಿ) ಆಯೋಜಿಸಲಾಗಿದೆ.
ಕಾಲೇಜಿನ ಪ್ರಾಂಶುಪಾ ಲ(ಐ/ಸಿ) ಡಾ. ಪ್ರಸನ್ನಕುಮಾರ್ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಂಟ್ಯುಪಲ್ ಟೆಕ್ನಾಲಜೀಸ್‌ನ ಸಂಪನ್ಮೂಲ ವ್ಯಕ್ತಿ ಶಿವಪ್ರಸಾದ್ ಅವರು ವಿಎಲ್‌ಎಸ್‌ಐ ತಂತ್ರಜ್ಞಾನದ ಪ್ರವೃತ್ತಿಗಳ ಕುರಿತು ಮಾತನಾಡಿದರು ಮತ್ತು ಅಧ್ಯಾಪಕರು ಅದನ್ನು ಬಳಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಇಸಿಇ ವಿಭಾಗದ ಎಚ್‌ಒಡಿ ಡಾ.ಮಾಧವಿ ಅವರು ಪ್ರಸ್ತುತ ವಿದ್ಯಮಾನಕ್ಕೆ CADENCE ಉಪಕರಣವು ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಅಧ್ಯಾಪಕರಿಗೆ ಸಂದೇಶವನ್ನು ನೀಡಿದರು. ಕಾಲೇಜಿನ ವಿವಿಧ ಅಧ್ಯಾಪಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಸಂಯೋಜಕರಾದ ಚೇತನ್ ಬಿ ಆರ್ ಮತ್ತು ಯೋಜನಾ ಯಾದವ್ ಉಪಸ್ಥಿತರಿದ್ದರು.
Also read: ಎಸ್‌ಎಸ್‌ಎಸ್‌ಸಿ ಚೆಸ್ ಸ್ಪರ್ಧೆ: ಜೈನ್ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post