ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಶಿವಮೊಗ್ಗ ಮತ್ತು ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ನಗರದಲ್ಲಿ ನಾಳೆ ಏಳು ಕಡೆಗಳಲ್ಲಿ ಪಾರ್ಕ್ ಮತ್ತು ಕೆರೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 256 ಲಕ್ಷದ ಕಾಮಗಾರಿಗಳಿಗೆ ಸಚಿವ ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಗೋಪಾಳದ 2ನೇ ಹಂತ ವಸತಿ ಬಡಾವಣೆಯಲ್ಲಿನ ಉದ್ಯಾನವನ ಅಭಿವೃದ್ಧಿ, ಸಿಎ ನಿವೇಶನದ ಹತ್ತಿರಕಾಂಕ್ರೀಟ್ ಬಾಕ್ಸ್ ನಿರ್ಮಾಣ, ಆಲ್ಕೊಳದ ವಿಕಾಸ ಶಾಲೆಯ ಬಳಿಯಿರುವ 12 ಎಕರೆ ಜಾಗದಲ್ಲಿನ ತುಂಗಾ ನಾಲಾ ಕೆರೆ ಅಭಿವೃದ್ದಿ, ಪ್ರಿಯದರ್ಶಿನಿ ಲೇಔಟ್‌ನ ಸರ್ವೆ ನಂಬರ್ 10ರಲ್ಲಿ ಕೆರೆ ಅಭಿವೃದ್ಧಿ, ಕಲ್ಲಹಳ್ಳಿಯಯಲ್ಲಿನ ಕೆ.ಹೆಚ್.ಬಿ ಕಾಲೋನಿ ಸಿ ಬ್ಲಾಕ್‌ನ ಉದ್ಯಾನವನ ಅಭಿವೃದ್ಧಿ ಕಾಮಗಾರಿ, ಮಾಧವ ನೆಲೆ ಎದುರಿನ ಉದ್ಯಾನವನ ಅಭಿವೃದ್ಧಿ ಕಾಮಗಾರಿ, ಆಶ್ರಯ ಬಡಾವಣೆಯಲ್ಲಿನ ಉದ್ಯಾನವನ ಅಭಿವೃದ್ಧಿ, ಕುವೆಂಪು ನಗರದ ವಸತಿ ಬಡಾವಣೆಯ ಸಿ-ಬ್ಲಾಕ್ ನ ಉದ್ಯಾನವನ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಬಿ ಬ್ಲಾಕ್ ನಲ್ಲಿರುವ 12 ಕಿಮೀ ಅಗಲದ ಅಡ್ಡ ರಸ್ತೆಗಳಿಗೆ ಡಾಂಬರೀಕರಣ, ಇದೇ ಬಡಾವಣೆಗಳಲ್ಲಿ ಎಲ್‌ಇಡಿ ವಿದ್ಯುತ್ ಬೀದಿ ದೀಪಗಳನ್ನ ಅಳವಡಿಸಲಾಗುತ್ತಿದೆ. ಉದ್ಯಾನವನಗಳಲ್ಲಿ ಫೆನ್ಸಿಂಗ್ ದುರಸ್ತಿ, ಪಾಥ್ ವೇ ನಿರ್ಮಾಣ, ಹೊರಾಂಗಣ ವ್ಯಾಯಾಮ ಸಾಮಾಗ್ರಿ ಅಳವಡಿಸುವುದು, ಚರಂಡಿಗಳಿಗೆ ಡೆಕ್ ಸ್ಲ್ಯಾಬ್ ನಿರ್ಮಾಣ, ಕೆರೆಗಳಲ್ಲಿ ಬಂಡಿನ ಆಯ್ದ ಭಾಗಗಳಲ್ಲಿ ರಿವಿಟ್ ಮೆಂಟ್ ದುರಸ್ಥಿ, ಸ್ಲೂಯಿಸ್ ದುರಸ್ಥಿ, ಜಂಗಲ್ ಕ್ಲಿಯರಿಂಗ್, ಕೆರೆ ಬಂಡ್ ರಸ್ತೆ ಅಭಿವೃದ್ಧಿ, ಪುಷ್ಕರಿಣಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
97 ಎಕರೆ ಸೋಮಿನಕೊಪ್ಪ ಲೇಔಟ್‌ನಲ್ಲಿ ಕೆರೆಯಿದೆ. ಜನ್ನಾಪುರದಲ್ಲಿ ಕೆರೆಗಳಿಗೆ ಮುಂದಿನ ದಿನಗಳಲ್ಲಿ ಸೂಡಾದಿಂದ ಕಾಯಕಲ್ಪ ಒದಗಿಸಲಾಗುವುದು, ಊರುಗಡೂರಿನ 62 ಎಕರೆ ಲೇಔಟ್ ನಿರ್ಮಾಣ ಮಾಡಲಾಗುವುದು. ಹಾಗೂ ಮಹೇಶ ಪಿಯು ಕಾಲೇಜಿನ ಎರಡು ಕಡೆ, ಜಿಮ್ ಮತ್ತು ಪಾರ್ಕ್ ಉದ್ಘಾಟಿಸಲಾಗುವುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post