ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಮುಂಭಾಗದ ಆವರಣದಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ SIMS ನಡೆಯುತ್ತಿರುವ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆಯನ್ನು ಸಂಸದ ಬಿ. ವೈ. ರಾಘವೇಂದ್ರ, MP Raghavendra ಆರೋಗ್ಯ ಸಚಿವರು, ಶಾಸಕರೊಂದಿಗೆ ನರ್ಸಿಂಗ್ ಕಾಲೇಜು, ಗೃಹ ವೈದ್ಯರ ಸ್ನಾತಕೋತ್ತರ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯ, 128 slice CT ಯಂತ್ರ, 33KL ಆಕ್ಸಿಜನ್ ಟ್ಯಾಂಕ್, ಫಿಲ್ಲಿಂಗ್ ಸ್ಟೇಷನ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮೊದಲ ಮಹಡಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಕೇಂದ್ರಿಯ ಗ್ರಂಥಾಲಯ ಕಾಮಗಾರಿ ರೂ. 300.00 ಲಕ್ಷ, ಎಂ.ಸಿ.ಹೆಚ್, ಬ್ಲ್ಯಾಕ್ ಕಟ್ಟಡ ಕಾಮಗಾರಿ ರೂ, 980.00 ಲಕ್ಷ, ಆಡಿಟೋರಿಯಂ ನವೀಕರಣ ಕಾಮಗಾರಿ ರೂ, 500.00 ಲಕ್ಷ ಪ್ರ.ಜಾತಿ/ ಪ.ಪಂಗಡದ ಸ್ನಾತಕೋತ್ತರ ಬಾಲಕರ ವಿದ್ಯಾರ್ಥಿನಿಲಯ ರೂ. 1000.00 ಲಕ್ಷ, ಮಕ್ಕಳ ಚಿಕಿತ್ಸಾ ವಿಭಾಗ ಮತ್ತು ಓಬಿಜಿ ಘಟಕದಲ್ಲಿ ಹೊಸದಾಗಿ ಮಾನಿಪೋಲ್ಡ್ ಕೊಠಡಿ ಕಾಮಗಾರಿ ರೂ, 70,00 ಲಕ್ಷ. , ಸಿಲ್ ಲಾಬ್ ಶಂಕು ಸ್ಮಾಪನೆ – ರೂ 112.00 ಲಕ್ಷ ರೂ. ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, B S Yadiyurappa ಗೃಹಸಚಿವರಾದ ಆರಗ ಜ್ಞಾನೇಂದ್ರ, Home Minister Araga Gnanendra ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, Minister Sudhakar ನಗರಾಭಿವೃದ್ಧಿ ಭೈರತಿ ಬಸವರಾಜ್, ಜಿಲ್ಲಾಧಿಕಾರಿ ಸೆಲ್ವಮಣಿ, ಜ್ಯೋತಿಪ್ರಕಾಶ್, ಸಿಮ್ಸ್ ನಿರ್ದೇಶಕರಾದ ಸಿದ್ದಪ್ಪ, ದಿವಾಕರ್ ಶೆಟ್ಟಿ, ಗೌತಮ್, ವಾಣಿ ಕೋರಿ ಉಪಸ್ಥಿತರಿದ್ದರು.
Also read: ಭದ್ರಾವತಿ: ಮೇ 3ರಿಂದ ಹಳೇನಗರದ ಶ್ರೀ ಹಳದಮ್ಮ ದೇವಿಯ ಜಾತ್ರಾಮಹೋತ್ಸವ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post