ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪುರಾತನ ದುರ್ಗಿಗುಡಿಯ ಶ್ರೀಸೀತಾರಾಮ ದೇವರ ಬ್ರಹ್ಮ ರಥೋತ್ಸವ ಇಂದು ಅದ್ದೂರಿಯಾಗಿ ನಡೆದಿದ್ದು, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
Also Read: ಎಲ್’ಪಿಜಿ ಬೆಲೆ ಏರಿಕೆ: ರಸ್ತೆಯಲ್ಲಿ ಒಲೆ ಹಚ್ಚಿ, ಚಿತ್ರಾನ್ನ ತಯಾರಿಸಿ ಯುವ ಕಾಂಗ್ರೆಸ್ ಪ್ರತಿಭಟನೆ
ಕೊರೋನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಶ್ರೀರಾಮನವಮಿ ಹಾಗೂ ಬ್ರಹ್ಮ ರಥೋತ್ಸವವನ್ನು ಸಾಂಕೇತಿಕವಾಗಿ ಆಚರಿಸಲಾಗಿತ್ತು. ಈ ಬಾರಿ ಸೋಂಕು ಕಡಿಮೆಯಾಗಿ ಜನಜೀವನ ಸಂಫೂರ್ಣ ಸಹಜಗೊಂಡಿರುವ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಬ್ರಹ್ಮ ರಥೋತ್ಸವ ಅಚರಿಸಲಾಯಿತು.
Also Read: ದೆಹಲಿ ಜೆಎನ್’ಯು ಗಲಾಟೆ: ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ಎಫ್’ಐಆರ್
ದೇವಸ್ಥಾನವು ಸುಮಾರು 95 ವರ್ಷಗಳ ಪೂರೈಸಿದ ಹಿನ್ನೆಲೆ ರಾಮ ದೇವರಿಗೆ 100 ಲೀಟರ್ ಕ್ಷೀರಾಭಿಷೇಕ ಮಾಡಲಾಯಿತು. ಆನಂತರ ದುರ್ಗಿಗುಡಿಯಲ್ಲಿ ಅದ್ದೂರಿಯಾಗಿ ಬ್ರಹ್ಮ ರಥೋತ್ಸವ ನಡೆಸಲಾಯಿತು. ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಇನ್ನು, ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ದುರ್ಗಿಗುಡಿ ಮಿತ್ರಕೂಟದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀರಾಮನವಮಿ ಪ್ರಯುಕ್ತ ಪಾನಕ ಕೋಸಂಬರಿ ವಿತರಣೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.
ಮಿತ್ರ ಕೂಟದ ಪ್ರಮುಖರಾದ ನರಸಿಂಹ ಗಂಧದಮನೆ, ಡಿ.ಜಿ. ಕಿರಣ್, ಎಸ್.ಡಿ. ಗುರುಮೂರ್ತಿ, ಭವಾನಿ, ನರಸಿಂಹ, ಸುಧೀರ್, ನರಸಿಂಹ, ಮಂಜು, ಸತೀಶ್, ಯಶವಂತ್, ಚೇತನ್ ಸೇರಿ ಹಲವರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post