ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮೀಪ ಚಲಿಸುತ್ತಿದ್ದ ಕಾರಿನ (ಡಸ್ಟರ್) ಇಂಜಿನ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ಸಂಜೆ ನಡೆದಿದೆ.
ಆಲ್ಕೊಳ ಸರ್ಕಲ್ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಇಂಜಿನ್‌ನಲ್ಲಿ ಮೊದಲಿಗೆ ಹೊಗೆ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಬೆಂಕಿ ನಂದಿಸಲಾಗಿದೆ.
ಗಾಡಿಕೊಪ್ಪದಿಂದ ಕಾರು ಬಸ್ ನಿಲ್ದಾಣದ ಕಡೆ ಚಲಿಸುತ್ತಿತ್ತು. ಸ್ಥಳೀಯರ ಮಾಹಿತಿ ಪ್ರಕಾರ ಗ್ಯಾರೇಜ್ ಗೆ ಬಿಟ್ಟಿದ್ದ ಕಾರನ್ನ ಪರೀಕ್ಷಿಸಲು ಮೆಕಾನಿಕ್ ಚಲಿಸಿಕೊಂಡು ಬಂದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ವಿನೋಬ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.new


















