ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ದೇಶೀಯ ವಿದ್ಯಾಶಾಲೆಯ ಅಮೃತ ಮಹೋತ್ಸವ ಹಾಗೂ ಪದವಿ ಪೂರ್ವ (ಸ್ವ) ಕಾಲೇಜಿನ ಸುವರ್ಣ ಮಹೋತ್ಸವ ಜ.4ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ Yaduveer Krishnadatta chamaraja Odeyar ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಸಂಸ್ಥೆಯ ಉಪಾಧ್ಯಕ್ಷ ಎಸ್.ಪಿ. ದಿನೇಶ್ ತಿಳಿಸಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜ.4ರಿಂದ 6ರವರೆಗೂ ಮಹೋತ್ಸವ ನಡೆಯಲಿದ್ದು, ಜ.4ರಂದು ಬೆಳಗ್ಗೆ 11 ಗಂಟೆಗೆ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸುವರ್ಣ ಮಹೋತ್ಸವವನ್ನು ಉದ್ಘಾಟಿಸಲಿದ್ದು, ಕಾಲೇಜಿನ ಅಧ್ಯಕ್ಷ ಕೆ.ಎನ್. ರುದ್ರಪ್ಪ ಕೊಳಲೆ ಹಾಗೂ ಕಾರ್ಯದರ್ಶಿ ಎಸ್. ರಾಜಶೇಖರ್ ಉಪಸ್ಥಿತರಿರಲಿದ್ದಾರೆ ಎಂದರು.
ಜ.5ರಂದು ನಡೆಯುವ ಕಾರ್ಯಕ್ರಮದಲ್ಲಿ ಸಚಿವದ್ವಯರಾದ ಆರಗ ಜ್ಞಾನೇಂದ್ರ, ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಪಾಲ್ಗೊಳ್ಳಲಿದ್ದು, ಜ.5ರಂದು ಸಂಸದ ಬಿ.ವೈ. ರಾಘವೇಂದ್ರ ಅವರು ಭಾಗಿಯಾಗಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಲೋಕಾಯುಕ್ತ ಬಿ.ಎಸ್. ಪಾಟೀಲ್ ಪಾಲ್ಗೊಳ್ಳಲಿದ್ದಾರೆ ಎಂದರು.
Also read: ಸಂಸದ ರಾಘವೇಂದ್ರ ಅವರ ಅಚ್ಚುಮೆಚ್ಚಿನ ಫೋಟೋಗ್ರಾಫರ್ ನೀರಲ್ಲಿ ಮುಳುಗಿ ಸಾವು
ಮೂರು ದಿನಗಳ ಕಾಲ ಸಂಜೆ ಡಿವಿಎಸ್ ಪಾಲಿಟೆಕ್ನಿಕ್ ಕಾಲೇಜ್ ನಲ್ಲಿ ಕರ್ನಾಟಕ ರತ್ನ ದಿ. ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದರು.
ಡಿವಿಎಸ್ ಶಾಲೆ ಆರಂಭವಾಗಿ 78 ವರ್ಷ ಪೂರೈಸಿದ್ದು, 75ವರ್ಷ ತುಂಬಿದ ವೇಳೆ ಕೊರೋನಾ ಪರಿಸ್ಥಿತಿಯಿದ್ದ ಕಾರಣ ಸಮಾರಂಭ ನಡೆಸಲು ಸಾಧ್ಯವಾಗಿರಲಿಲ್ಲ. ಈಗ ಡಿವಿಎಸ್ ನಡೆಸುವ ಸ್ವತಂತ್ರಪದವಿ ಪೂರ್ವ ಕಾಲೇಜಿಗೆ, ಡಿವಿಎಸ್ ನ ಮತ್ತು ಕಲಾ ಮತ್ತು ವಿಜ್ಞಾನ ಕಾಲೇಜಿಗೆ 50 ವರ್ಷ ಕಳೆದಿದೆ. ಹೀಗಾಗಿ, ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















