ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಡಿವಿಎಸ್ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರು, ವಿಶ್ರಾಂತ ಆಡಳಿತಾಧಿಕಾರಿಗಳು ಮತ್ತು ಜ್ಞಾನ ದೀಪ ಶಿಕ್ಷಣ ಸಂಸ್ಥೆಯ ವಿಶ್ರಾಂತ ಕಾರ್ಯದರ್ಶಿಗಳಾದ ವಿ. ದೇವೇಂದ್ರ (88) ವಿಧಿವಶರಾಗಿದ್ದಾರೆ.
ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಅನನ್ಯವಾದ ಕೊಡುಗೆ ನೀಡಿದ್ದ ಇವರು ವಿಡಿಆರ್ ಎಂದೇ ಖ್ಯಾತರಾಗಿದ್ದರು.
ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಬಂಧು ಬಳಗ ಹಾಗೂ ಅಪಾರ ಶಿಷ್ಯವರ್ಗವನ್ನು ಅಗಲಿದ್ದಾರೆ.
ಇಂದು ರಾತ್ರಿ 9.30ಕ್ಕೆ ವಿಧಿವಶರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಏಪ್ರಿಲ್ 6ರ ಶನಿವಾರ ಬೆಳಿಗ್ಗೆ 11 ಗಂಟೆಗೆ ರೋಟರಿ ಚಿತಾಗಾರದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post