ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವಿಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ #Minister Madhu Bangarappa ಅವರಿಗೆ `ಶಿಕ್ಷಣ ಬಂಗಾರ ಮಧು ಬಂಗಾರಪ್ಪ’ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.
ಶಿಕ್ಷಣ ಮಾತ್ರ ಬಡವರ ಬದುಕನ್ನು ಬದಲಾಯಿಸುವ ಮಂತ್ರ ಎಂದು ನಂಬಿದ್ದರು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ. ಹೀಗಾಗಿ ಮಕ್ಕಳು ಅಪ್ಪ-ಅಮ್ಮನೊಂದಿಗೆ ಕೂಲಿ-ನಾಲಿಗೆ ಹೋಗದೇ ಸಾಲಿಗುಡಿಗೆ ಬರಲಿ ಎಂಬ ಕಾರಣಕ್ಕೆ ಶಾಲೆಯಲ್ಲಿ ಮಗುವಿನ ಹಾಜರಿ ಆಧರಿಸಿ ದಿನಕ್ಕೊಂದು ರೂಪಾಯಿ ಪ್ರೋತ್ಸಾಹಧನ ಕೊಡುವ ಯೋಜನೆ ಆರಂಭಿಸಿದ್ದರು. ಕಲಿತು ಬರುವ ಮಗು ಗಳಿಕೆಯನ್ನು ಮಾಡಿ ಮನೆಯವರ ತುತ್ತಿಗೆ ತನ್ನ ಪಾಲು ಕೊಡುತ್ತಿತ್ತು. ಈಗ ಬರೋಬ್ಬರಿ ಮೂರು ದಶಕಗಳ ನಂತರ ಅವರ ಪುತ್ರ ಮಧು ಬಂಗಾರಪ್ಪ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಚುಕ್ಕಾಣಿ ಹಿಡಿದಿದ್ದಾರೆ. ಅಪ್ಪನ ಹಾದಿಯಲ್ಲೇ ಮಧು ಕೂಡ ಸಾಗುತ್ತಿದ್ದು ಈ ಹಿನ್ನಲೆಯಲ್ಲಿ ಅವರಿಗೆ ಶಿಕ್ಷಣ ಬಂಗಾರ ಬಿರುದನ್ನು ನೀಡಲಾಗಿದೆ.
ಆ ಹಾದಿಯಲ್ಲಿ ಖಾಸಗಿಯವರಿಗಿಂತ ಭಿನ್ನವಾದ ಹಾಗೂ ಗುಣಮಟ್ಟದ ಶಿಕ್ಷಣವನ್ನು ಕೆಪಿಎಸ್ ಶಾಲೆಗಳ ಆರಂಭದ ಮೂಲಕ ಗ್ರಾಮೀಣರ, ಬಡವರ ಮನೆ ಬಾಗಿಲಿಗೆ ತಂದಿದ್ದಾರೆ. ಕೆಪಿಎಸ್ ಶಾಲೆಗಳು ಮಾತ್ರವಲ್ಲದೇ ವಿದ್ಯಾರ್ಥಿ ಸ್ನೇಹಿ ಸುಧಾರಣೆಗಳಾದ `ಮೂರು ಪರೀಕ್ಷಾ ಪದ್ಧತಿ’, ಪಾರದರ್ಶಕತೆಗಾಗಿ ಪರೀಕ್ಷಾ ಕೇಂದ್ರಗಳಲ್ಲಿ `ವೆಬ್‍ಕಾಸ್ಟಿಂಗ್’ ಅಳವಡಿಕೆ, ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ತೇರ್ಗಡೆ ಅಂಕಗಳನ್ನು ಶೇ. 35 ರಿಂದ ಶೇ. 33ಕ್ಕೆ ಇಳಿಸಿರುವುದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿದೆ. ಸಮಾಜದ ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ಮೂಲ ಸೌಕರ್ಯಗಳನ್ನು ಒದಗಿಸುವ ಕಾರ್ಯಕ್ಕೂ ಅವರು ಮುಂದಾಗಿದ್ದಾರೆ.
ಬಿರುದು ಸ್ವೀಕರಿಸಿದ ಮಾತನಾಡಿದ ಮಧುಬಂಗಾರಪ್ಪ, ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಈಗಾಗಲೇ ಸರಳಗೊಳಿಸಿದ್ದು, ಮುಂದಿನ ದಿನಗಳಲ್ಲಿ ನಿಯಮಗಳನ್ನು ಇನ್ನಷ್ಟು ಸರಳೀಕರಣಗೊಳಿಸುವ ಭರವಸೆ ನೀಡಿ ಇಲಾಖೆಯನ್ನು ಜನಸ್ನೇಹಿಯಾಗಿಸುವ ಕಾರ್ಯ ಹೀಗೆ ನಿರಂತರವಾಗಿರಲಿದೆ ಎಂಬ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಡಿ.ಟಿ. ಶ್ರೀನಿವಾಸ್, ರಾಮೋಜಿ ಗೌಡ, ಭಾರತೀಯ ಶಿಕ್ಷಣ ಮಂಡಳಿಯ ಕಾರ್ಯನಿರತ ಅಧ್ಯಕ್ಷ ಎನ್.ಪಿ. ಸಿಂಗ್ ಮತ್ತು ಏಂಒS ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















