ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿಯ ಯಾವುದೇ ಶಾಸಕರು ಅಥವಾ ವಿಧಾನ ಪರಿಷತ್ ಸದಸ್ಯರು ಯಾವುದೇ ಕಾರಣಕ್ಕೂ ಕಾಂಗ್ರೆಸ್‍ಗೆ ಹೋಗುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ KSEshwarappa ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಖಾಲಿ ಮಾಡುತ್ತಾರೆ ಎಂಬ ಕಾಂಗ್ರೆಸ್ ಹೇಳಿಕೆಗೆ ಜನ ಲೋಕಸಭಾ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ. ಯಾವ ಪಕ್ಷ ಬೀದಿಗೆ ಬರುತ್ತದೆ ಎಂಬುದ ಗೊತ್ತಾಗಲಿದೆ ಇದೇ ಸಿದ್ದರಾಮಯ್ಯ ಸೂರ್ಯ ಚಂದ್ರರಿರುವವರೆಗೆ ಕಾಂಗ್ರೆಸ್ ಬಿಟ್ಟ 17 ಶಾಸಕರನ್ನು ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದರು. ಈಗ ಅವರನ್ನು ಸೆಳೆಯಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ಪ್ರಯತ್ನ ಫಲಿಸುವುದಿಲ್ಲ ಎಂದರು.
ಪ್ರಧಾನಿ ಮೋದಿಯವರ PM Modi ಇಂದಿನ ಬೆಂಗಳೂರು ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿಶ್ವದಲ್ಲೆ ಅತ್ಯಂತ ದೊಡ್ಡ ಸಾಧನೆ ಮಾಡಿದ ಇಸ್ರೋ ವಿಜ್ಞಾನಿಗಳನ್ನು ಮೋದಿಯವರು ಬೆಂಗಳೂರಿಗೆ ಬಂದು ಅಭಿನಂದಿಸಿ, ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Also read: ಆಗಸ್ಟ್ 23 ಇನ್ನು ಮುಂದೆ ರಾಷ್ಟ್ರೀಯ ಬಾಹ್ಯಾಕಾಶ ದಿನ: ಪ್ರಧಾನಿ ಮೋದಿ ಘೋಷಣೆ
ಭಾರತೀಯ ಸಂಸ್ಕೃತಿ, ಸಂಸ್ಕಾರ ಜೊತೆಗೆ ಇಲ್ಲಿನ ವೈಜ್ಞಾನಿಕ ಸಾಧನೆಯನ್ನು ಇಡೀ ವಿಶ್ವವೇ ಮೆಚ್ಚಿದೆ. ಮೊಸರಲ್ಲಿ ಕಲ್ಲು ಹುಡುಕುವ ರಾಜಕಾರಣವನ್ನು ಕೆಲವರು ಮಾಡುತ್ತಿದ್ದಾರೆ. ಈ ಸಾಧನೆ ಬಿಜೆಪಿಯ ಸಾಧನೆ ಅಲ್ಲ. ಇದು ರಾಷ್ಟ್ರದ ಸಾಧನೆ.ವಿಜ್ಞಾನಿಗಳಿಗೆ ಅಭಿನಂದಿಸಿ ಸಿಹಿ ಹಂಚಿದರೆ ಸಿಹಿಗೆ ಯಾಕೆ ದುಡ್ಡು ಖರ್ಚು ಮಾಡಿದಿರಿ ಎಂದು ಕೇಳುವ ಮುಟ್ಠಾಳರು ಕೆಲವರಿದ್ದಾರೆ. 1700 ಕೋಟಿ ಖರ್ಚು ಮಾಡಿದ ರಷ್ಯಾ ಯಶಸ್ಸು ಕಾಣಲಿಲ್ಲ. 650 ಕೋಟಿ ಖರ್ಚು ಮಾಡಿದ ನಾವು ಚಂದ್ರಯಾನದಲ್ಲಿ ಯಶಸ್ಸು ಕಂಡಿದ್ದೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post