ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತೀಯ ಚುನಾವಣಾ ಆಯೋಗವು ಇಂದು ರಾಜ್ಯ ವಿಧಾನಸಭಾ ಚುನಾವಣೆ ಘೋಷಿಸಿದ್ದು, ಇಂದಿನಿಂದಲೇ ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತಿಯನ್ನು ಕಟುನಿಟ್ಟಿನಿಂದ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ತಿಳಿಸಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಹಿನ್ನೆಲೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 14,58,680 ಮತದಾರರು ನೋಂದಾಯಿಸಿಕೊAಡಿದ್ದಾರೆ. 722080 ಪುರುಷ, 736574 ಮಹಿಳೆ, 14773 ಪಿಡಬ್ಲುಡಿ (ಪರ್ಸನ್ಸ್ ವಿತ್ ಡಿಸ್’ಎಬಿಲಿಟಿ) 26 ಇತರೆ ಮತದಾರರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಎಸ್.ಬಿರಾರ್ದ ಹಾಜರಿದ್ದರು.
ಚುನಾವಣಾ ವೇಳಾಪಟ್ಟಿ
- 13-04-2023 ಚುನಾವಣಾ ಅಧಿಸೂಚನೆ
- 20-04-2023 ಉಮೇದುವಾರಿಕೆ ಸಲ್ಲಿಕೆಗೆ ಕಡೆಯ ದಿನ
- 21-04-2023 ಉಮೇದುವಾರಿಕೆ ಪರಿಶೀಲನೆ ದಿನ
- 24-04-2023 ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನ
- 10-05-2023 ಮತದಾನದ ದಿನ
- 13-05-2023 ಮತ ಎಣಿಕೆ ದಿನ
- 15-05-2023 ಮತದಾನ ಮುಕ್ತಾಯ ದಿನ
Also read: ಸ್ವಸ್ತಿಶ್ರೀ ಭಟ್ಟಾರಕರು ವ್ಯಕ್ತಿಯಲ್ಲ, ವ್ಯಕ್ತಿತ್ವವೂ ಅಲ್ಲ, ಅವರೊಂದು ಪರಂಪರೆ
ಮತಗಟ್ಟೆಗಳು
- ಶಿವಮೊಗ್ಗ ಗ್ರಾಮಾಂತರ: 111 ರಲ್ಲಿ 247 ಮತಗಟ್ಟೆಗಳು
- ಭದ್ರಾವತಿ-112 ರಲ್ಲಿ 253 ಮತಗಟ್ಟೆಗಳು
- ಶಿವಮೊಗ್ಗ-113 ರಲ್ಲಿ 282 ಮತಗಟ್ಟೆಗಳು
- ತೀರ್ಥಹಳ್ಳಿ-114 ರಲ್ಲಿ 258
- ಶಿಕಾರಿಪುರ-115 ರಲ್ಲಿ 232
- ಸೊರಬ-116 ರಲ್ಲಿ 239
- ಸಾಗರ-117 ರಲ್ಲಿ 264
- ಒಟ್ಟು 1775 ಮತಗಟ್ಟೆಗಳು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post