ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಂಬರುವ ವಿಧಾನಸಭೆ ಚುನಾವಣೆಗೆ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಲು ನಾಗರಿಕರಿಂದಲೇ ಸಹಿ ಸಂಗ್ರಹಣೆ ಮಾಡುವುದರ ಮೂಲಕ ನಗರದ ಮಂಡ್ಲಿಯ ಸ್ಮಶಾನದಿಂದ ಚುನಾವಣಾ ಅಭಿಯಾನವನ್ನು ಆಕಾಂಕ್ಷಿ ಅಭ್ಯರ್ಥಿಯಾಗಿ ಆರ್. ವೆಂಕಟೇಶ್ ಪ್ರಜಾಕೀಯ ವಿಭಿನ್ನ ರೀತಿಯಲ್ಲಿ ಪ್ರಾರಂಭಿಸಿದರು.
ಸ್ಮಶಾನದಲ್ಲೆ ಸುದ್ದಿಗೋಷ್ಟಿ ಮಾಡಿದ ಅವರು, ಪಕ್ಷದ ತೀರ್ಮಾನದಂತೆ ಮತದಾರರ ಬೇಡಿಕೆಗಳನ್ನು ಈಡೇರಿಸಲು ನಾನು ಸಿದ್ಧ ಎಂದು ಧೃಡೀಕರಿಸಿ ನಂತರ ಅವರು ಈತ ಅಭ್ಯರ್ಥಿಯಾಗಲು ಸಮ್ಮತಿಯಿದೆ ಎಂದು ಉತ್ತಮ ಪ್ರಜಾಕೀಯ ಪಕ್ಷಕ್ಕೆ ತಿಳಿಸಬೇಕು. ಯಾರಿಗೆ ಹೆಚ್ಚಿನ ಬೆಂಬಲ ನಾಗರೀಕರು ನೀಡುತ್ತಾರೆ ಪಕ್ಷ ಅವರಿಗೆ ಈ ಬಾರಿಯ ಟಿಕೇಟ್ ನೀಡುತ್ತದೆ. ಆದ್ದರಿಂದ ಸತ್ಯಹರಿಶ್ಚಂದ್ರನ ಪವಿತ್ರ ಕ್ಷೇತ್ರವಾದ ಸ್ಮಶಾನದಿಂದಲೇ ನಾನು ವಿಭಿನ್ನ ರೀತಿಯ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದೇನೆ ಎಂದರು.

Also read: ರಸ್ತೆ ಕಾಮಗಾರಿ ವಿಚಾರದಲ್ಲಿ ಪಾಲಿಕೆ ಸದಸ್ಯ ಆರ್.ಸಿ. ನಾಯ್ಕ್ ವಿರುದ್ದ ಸುಳ್ಳು ಆರೋಪ: ರೇಖಾ ರಂಗನಾಥ್
ಒಂದು ವೇಳೆ ಪ್ರಜಾಕೀಯ ಪಕ್ಷ ಅಭ್ಯರ್ಥಿ ಗೆದ್ದರೆ ಆತ ಮೊದಲು ಮತದಾರರ ಬೇಡಿಕೆಯ ಪಟ್ಟಿಗಳನ್ನು ಮಾಡಬೇಕು. ಎಲ್ಲರೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತರಬೇಕು. ಯೋಜನೆಗಳು ಮುಗಿಯುವ ಸಮಯ, ವೆಚ್ಚ, ಗುಣಮಟ್ಟ, ಬಾಳಿಕೆಯ ವಿವರಗಳನ್ನು ಪ್ರಜೆಗಳಿಗೆ ತಿಳಿಸಬೇಕು. ಎಲ್ಲಾ ಯೋಜನೆಗಳು ಸಂಪೂರ್ಣ ಪಾರದರ್ಶಕತೆಯಿಂದ ಕಾರ್ಯರೂಪಕ್ಕೆ ತರಬೇಕು. ಕಾಮಗಾರಿಯ ಅಧಿಕೃತ ದೃಶ್ಯ ದಾಖಲೆಗಳನ್ನು ಇಡಬೇಕು. ಪ್ರಜೆಗಳ ಅಭಿಪ್ರಾಯದ ಮೂಲಕವೇ ಯೋಜನೆ ಜಾರಿಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಚಂದ್ರಶೇಖರ್, ಡ್ಯಾನಿ, ನಿಕಿಲ್, ಗಣೇಶ್, ವಿಕ್ಕಿ, ರಾಕೇಶ್ ಮತ್ತಿತರರಿದ್ದರು.










Discussion about this post