ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಚುನಾವಣೆ-2021ನ್ನು ನವೆಂಬರ್ 21 ರಂದು ನಡೆಸಲು ನಿಗದಿಗೊಳಿಸಲಾಗಿದ್ದು, ಸರ್ಕಾರದ ಆದೇಶದಕಂತೆ ಕೆಳಕಂಡಂತೆ ಪರಿಷ್ಕೃತ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಗಡಿನಾಡ/ಹೊರನಾಡ ಮತದಾರರಿಗೆ ಕೇಂದ್ರ ಚುನಾವಣಾಧಿಕಾರಿಗಳ ಕಚೇರಿಯಿಂದ ರಿಜಿಸ್ಟರ್ಡ್ ಅಂಚೆಯ ಮೂಲಕ ಮತಪತ್ರಗಳ ರವಾನೆಗೆ ಕೊನೆಯ ದಿನಾಂಕ: 06-11-2021 ಆಗಿರುತ್ತದೆ.
ಮತದಾನ(ಅವಶ್ಯವಿದ್ದಲ್ಲಿ) ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ಹಾಲಿ ಹೋಬಳಿ ಮತಕೇಂದ್ರಗಳಲ್ಲಿ ಗುರುತಿಸಲಾದ ಮತಗಟ್ಟೆಗಳಲ್ಲಿ ಹಾಗೂ ಬೆಂಗಳೂರು ನಗರ ಜಿಲ್ಲೆಯ ಮತಗಟ್ಟೆಗಳಲ್ಲಿ ನವೆಂಬರ್ 21 ರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ. ನವೆಂಬರ್ 21 ರಂದೇ ಮತದಾನದ ನಂತರ ಮತ ಎಣಿಕೆ ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷರ ಫಲಿತಾಂಶ ಘೋಷಣೆ ಮಾಡಲಾಗುವುದು.
ಶಿವಮೊಗ್ಗ-ಮತ ಎಣಿಕೆ ವಿವರ :
ಶಿವಮೊಗ್ಗ ಜಿಲ್ಲೆಯ ಆಯಾ ತಾಲ್ಲೂಕುಗಳಲ್ಲಿ ನ.21 ರಂದು ಚುನಾವಣೆ ನಡೆಯಲಿದ್ದು ಶಿವಮೊಗ್ಗ ತಾಲ್ಲೂಕಿಗೆ ಸಂಬಂಧಿಸಿದಂತೆ ಒಟ್ಟು ಮೂರು ಮತಗಟ್ಟೆಗಳಲ್ಲಿ ಶಿವಮೊಗ್ಗ ತಾಲ್ಲೂಕು ಕಚೇರಿಯ ಕಟ್ಟಡ ಸಂಕೀರ್ಣದಲ್ಲಿ ನಡೆಯಲಿದೆ. ಮತಗಟ್ಟೆ ಸಂಖ್ಯೆ 9/1-1, 9/1-2, 9/1-3 ಆಗಿರುತ್ತದೆ ಎಂದು ಕ.ಸಾ.ಪ ಚುನಾವಣಾಧಿಕಾರಿ ಹಾಗೂ ಶಿವಮೊಗ್ಗ ತಹಶೀಲ್ದಾರ್ ಎನ್.ಜೆ. ನಾಗರಾಜ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post