ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜೂನ್ 17 ರಿಂದ ರೈಲ್ವೆಯ ಎಲೆಕ್ಟ್ರಿಕಲ್ ಲೋಕೋ ಮೋಟಿವ್ ಸಂಚಾರದ ಪ್ರಯೋಗಾರ್ಥವಾಗಿ ನಿನ್ನೆ ರಾತ್ರಿ ಬೆಂಗಳೂರು ಮತ್ತು ಶಿವಮೊಗ್ಗದ ನಡುವೆ ಸಂಚಾರ ಆರಂಭಗೊಂಡಿದೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವ 12079 ಜನಶತಾಬ್ದಿ ರೈಲಿನ ಸಂಚಾರ ನಿನ್ನೆ ರಾತ್ರಿ ಎಲೆಕ್ಟ್ರಿಕಲ್ ಇಂಜಿನ್ ಸಹಾಯದಿಂದ ಸಂಚಾರ ನಡೆಸಿದೆ. ಈ ಸಂಚಾರವನ್ನ ಪ್ರಯೋಗಾತ್ಮಕವೆಂದು ಪರಿಗಣಿಸಲಾಗಿದೆ.
ಜೂ.17 ನೇ ತಾರೀಖಿನ ವರೆಗೂ ಈ ಪರಿಶೀಲನೆ ನಡೆಯಲಿದೆ.17 ರ ನಂತರ ಎಲೆಕ್ಟ್ರಿಕಲ್ ರೈಲಿನ ಸಂಚಾರ ಅಧಿಕೃತವಾಗಲಿದೆ. ಜನಶತಾಬ್ದಿ ಮತ್ತು ಯಶವಂತ್ ಪುರ ರೈಲು ಜೂ.17 ರಿಂದ ಎಲೆಕ್ಟ್ರಿಕ್ ಇಂಜಿನ್ ನೊಂದಿಗೆ ಸಂಚಾರ ಆರಂಭವಾಗಲಿದೆ.
Also read: ಶಿವಮೊಗ್ಗ ಬಳಿ ಭೀಕರ ರಸ್ತೆ ಅಪಘಾತ: ಇಬ್ಬರು ಬೈಕ್ ಸವಾರರು ಸಾವು
ಪ್ರಾಯೋಗಿಕವಾಗಿ ಸಂಜೆ 5-30 ಕ್ಕೆ ಬೆಂಗಳೂರನ್ನ ಬಿಡುವ ಜನಶತಾಬ್ದಿ ರಾತ್ರಿ 9-45 ಕ್ಕೆ ಶಿವಮೊಗ್ಗ ತಲುಪಿದೆ. ಇನ್ನು ಮುಂದೆ ಡೀಸೆಲ್ ಇಂಜಿನ್ ಬದಲು ಎಲೆಕ್ಟ್ರಿಕ್ ಇಂಜಿನ್ ಸಂಚರಿಸುತ್ತವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post