ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದಲ್ಲಿ ಪ್ರಧಾನಿ ಮೋದಿಯವರ PM Narendra Modi ಚುನಾವಣಾ ಪ್ರಚಾರ ಸಮಾವೇಶದಿಂದ ರಾಜ್ಯಕ್ಕೆ ಒಂದು ಉತ್ತಮ ಸಂದೇಶ ಹೋದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ B Y Vijayendra ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಲೋಕಸಭಾ ಕ್ಷೇತ್ರದ ಚುನಾವಣಾ Lok Sabha Election ಪ್ರಚಾರ ಕೈಗೊಂಡಿದ್ದು, ಕಾರ್ಯಕರ್ತರಲ್ಲಿ ಉತ್ಸಾಹ ಇದೆ. ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ರಾಜ್ಯಕ್ಕೆ ಒಂದು ಉತ್ತಮ ಸಂದೇಶ ಹೋದಿದೆ ಎಂದರು.
ಈಶ್ವರಪ್ಪನವರು Eshwarappa ಹಿರಿಯರಿದ್ದಾರೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಿಜೆಪಿ ರಾಜ್ಯಾದ್ಯಕ್ಷನ್ನಾಗಿ ನಾನೊಬ್ಬನೇ ಅಭ್ಯರ್ಥಿಗಳ ಆಯ್ಕೆ ಮಾಡಲು ಸಾಧ್ಯವಿಲ್ಲ. ನನ್ನಬ್ಬೊನ ಮಾತು ಕೇಳುವ ಸ್ಥಿತಿಯಲ್ಲಿ ರಾಷ್ಟ್ರೀಯ ನಾಯಕರಿಲ್ಲ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ ಎಂದರು.
Also read: ನಾಳೆ ಕಾರೇಹಳ್ಳಿ ಬಳಿ ಗೀತಾ ಶಿವರಾಜಕುಮಾರ್’ಗೆ ಅದ್ದೂರಿ ಸ್ವಾಗತ | ಭದ್ರಾವತಿಯಲ್ಲಿ ರ‍್ಯಾಲಿ
ಸಂಸದ ರಾಘವೇಂದ್ರ MP Raghavendra ಅತಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಪಕ್ಷಾತೀತಾವಾಗಿ ಅವರನ್ನು ಜನರು ಒಪ್ಪಿಕೊಳ್ಳುತ್ತಾರೆ. ಯಾರೇ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ ಅದು ರಾಷ್ಟ್ರೀಯ ನಾಯಕರ ಆಯ್ಕೆ. ಗೆದ್ದು ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲ ಪಡಿಸುವ ಕೆಲಸ ಇದೆ ಎಂದರು.
ಹಿಂದೆ ಕೂಡ ವರುಣಾ ದಲ್ಲಿ ನನಗೆ ಟಿಕೇಟ್ ಕೈ ತಪ್ಪಿತು. ಆದರೆ, ಅದು ವರಿಷ್ಠರ ತೀರ್ಮಾನ ಎಂದುಕೊಂಡು ಪಕ್ಷದ ಕೆಲಸ ಮಾಡಿದ್ದೆ. ಎಲ್ಲವು ಕೂಡ ಬಗೆಹರಿಯುತ್ತದೆ ಎಂಬ ವಿಶ್ವಾಸ ಇದೆ. ಜೆಡಿಎಸ್ ಮೈತ್ರಿ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಏನು ಚರ್ಚೆ ಆಗಿದಿಯೋ ಗೊತ್ತಿಲ್ಲ. ಸೀಟ್ ಶೇರಿಂಗ್ ವಿಚಾರವಾಗಿ ಎಲ್ಲವು ಬಗೆಹರಿಯುತ್ತದೆ. ಯಾರು ಅಭ್ಯರ್ಥಿ ಆಗಿ ತೀರ್ಮಾನ ಆಗಿದಿಯೋ ಅದು ರಾಷ್ಟ್ರೀಯ ನಾಯಕರ ತೀರ್ಮಾನ. ಅದಕ್ಕೆ ಗೌರವ ಕೊಡಬೇಕಾಗುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post