ತಮ್ಮನ್ನು ಹೆಮ್ಮೆಯಿಂದ ಸನ್ಮಾನಿಸಿದ ಶಿವಮೊಗ್ಗ ಸಂಘಕ್ಕೆ ಆಭಾರಿಯಾಗಿದ್ದೇನೆ. ಕನ್ನಡ ಚಿತ್ರರಂಗದ ಎಲ್ಲಾ ಗಣ್ಯ ವ್ಯಕ್ತಿಗಳು ಹಾಗೂ ತಮ್ಮ ನೆಚ್ಚಿನ ಅಭಿಮಾನಿಗಳು ಎಲ್ಲಾ ರೀತಿಯ ಪ್ರೀತಿ , ಪ್ರೋತ್ಸಾಹ, ಅಭಿಮಾನ ನೀಡಿದ್ದಕ್ಕೆ ತಾನು ಎಂದಿಗೂ ಚಿರಋಣಿ ಎಂದು ಸಂಗೀತ ನಿರ್ದೇಶಕ ಗುರುಕಿರಣ್ Music Director Gurukiran ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಾ. ಎ. ಸತೀಶ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಡಾ. ವೈ.ವಿ. ಶೆಟ್ಟಿ, ಕಾರ್ಯದರ್ಶಿ ಸುರೇಶ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಕೃಷ್ಣಪ್ಪ ಶೆಟ್ಟಿ ಮತ್ತು ಕೃಷ್ಣಶೆಟ್ಟಿ, ಸಿಮ್ಸ್ ಆಡಳಿತ ಮಂಡಳಿ ಸದಸ್ಯ ದಿವಾಕರ್ ಶೆಟ್ಟಿ, ಸಾಯಿ ಇಂಟರ್‌ನ್ಯಾಷನಲ್ ಮಾಲೀಕರಾದ ಶ್ರೀನಾಥ್ ಹೆಗಡೆ , ಪುಷ್ಪ ಶೆಟ್ಟಿ, ರಾಜ್ ಮೋಹನ್ ಹೆಗಡೆ, ಮಂಜುನಾಥ ಶೆಟ್ಟಿ, ಉದಯ್ ಶೆಟ್ಟಿ ಕಡಂಬ, ಭಾಸ್ಕರ್ ಶೆಟ್ಟಿ, ಉದಯ್ ಶೆಟ್ಟಿ ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
Discussion about this post