ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗ್ರಾಹಕರು ತಾವು ಖರೀದಿಸಿದ ಉತ್ಪನ್ನಗಳಲ್ಲಿ ಅಥವಾ ಸೇವೆಗಳಲ್ಲಿ ಯಾವುದೇ ತರಹದ ಕೊರತೆ ಕಂಡು ಬಂದಲ್ಲಿ ಅದರ ವಿರುದ್ಧ ಧ್ವನಿಯನ್ನು ಎತ್ತಬೇಕು ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ, ಶಿವಮೊಗ್ಗ ಇದರ ಗೌರವ ಸದಸ್ಯರಾದ ಸವಿತಾ ಬಿ. ಪಟ್ಟಣಶೆಟ್ಟಿ ಸಲಹೆ ನೀಡಿದರು.
ವಿಶ್ವಗ್ರಾಹಕರ ದಿನಾಚರಣೆ ಅಂಗವಾಗಿ ಶಿವಮೊಗ್ಗ ಜಿಲ್ಲಾಗ್ರಾಹಕ ಮಾಹಿತಿ ಕೇಂದ್ರದ (ಡಿಸಿಐಸಿ) ಸಹಯೋಗದಲ್ಲಿ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಮ್ಯಾನೇಜ್‌ಮೆಂಟ್ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ಎಂಬಿಎ ಮತ್ತು ಎಂಕಾA ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಗ್ರಾಹಕರ ಅರಿವು ಕಾರ್ಯಕ್ರಮವನ್ನು ಉz್ದೆÃಶಿಸಿ ಅವರು ಮಾತನಾಡಿದರು.
ಗ್ರಾಹಕರು ತಾವು ಖರೀದಿಸಿದ ಉತ್ಪನ್ನಗಳಲ್ಲಿ ಅಥವಾ ಸೇವೆಗಳಲ್ಲಿ ಯಾವುದೇ ತರಹದ ಕೊರತೆ ಕಂಡು ಬಂದಲ್ಲಿ ಅದರ ವಿರುದ್ಧ ಧ್ವನಿಯನ್ನು ಎತ್ತಬೇಕು. ಅಲ್ಲದೆ ತಮ್ಮ ಹಕ್ಕುಗಳನ್ನು ಚಲಾಯಿಸುವುದರ ಜೊತೆಗೆ ಗ್ರಾಹಕರು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ಅರಿಯುವ ಅವಶ್ಯಕತೆ ಇದೆ. ಹೊಸ ಗ್ರಾಹಕ ಸಂರಕ್ಷಣಾ ಕಾಯ್ದೆ- 2019 ಇ ಕಾಮರ್ಸ್ನ್ನು ಸೇರಿಸಿರುವುದು ಭಾರತದಲ್ಲಿ ಗ್ರಾಹಕ ಚಳುವಳಿಗೆ ಬಹು ದೊಡ್ಡ ಶಕ್ತಿಯಾಗಿದೆ. ಜವಾಬ್ದಾರಿಯ ಪ್ರಜ್ಞೆಯೊಂದಿಗೆ ಗ್ರಾಹಕರುತಮ್ಮ ಹಕ್ಕುಗಳನ್ನು ಚಲಾಯಿಸುವ ಅಗತ್ಯವಿದೆ ಎಂದರು.
Also read: ವಿಟಿಯು ಮಧ್ಯವಲಯ ಕ್ರಿಕೆಟ್: ಶಿವಮೊಗ್ಗದ ಪಿಇಎಸ್ ಕಾಲೇಜಿಗೆ ದ್ವಿತೀಯ ಸ್ಥಾನ
ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಚಾಲಕ ಎಂ.ಎಂ. ಜಯಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಹೇಗೆಲ್ಲ ಮೋಸ ಹೋಗುತ್ತಿದ್ದಾರೆ ಎಂಬುದನ್ನು ನೈಜ ಘಟನೆಗಳನ್ನು ಉದಾಹರಿಸಿ ವಿವರಿಸಿದರು.
ಈ ದೇಶದಲ್ಲಿ ಕೆಲವೇ ಕೆಲವು ನಾಗರೀಕರು ನಿಜವಾಗಿಯೂ ಗ್ರಾಹಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಗ್ರಾಹಕರು ಒಂದಾಗುವವರೆಗೆ ಮತ್ತು ತಮಗಾಗುತ್ತಿರುವ ಅನ್ಯಾಯದ ವ್ಯಾಪಾರ ಪದ್ಧತಿಗಳ ವಿರುದ್ಧ ಹೋರಾಡದಿದ್ದರೆ ಶೋಷಣೆ ಮುಂದುವರೆಯುತ್ತದೆ. ಆದ್ದರಿಂದ ಗ್ರಾಹಕರಿಗೆ ಶಿಕ್ಷಣವನ್ನು ನೀಡುವಲ್ಲಿ ಶಿವಮೊಗ್ಗ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದೊAದಿಗೆ ಎಲ್ಲಾ ವಿದ್ಯಾರ್ಥಿಗಳು ತಮ್ಮ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪಿಇಎಸ್‌ಟ್ರಸ್ಟ್ ನ ಮುಖ್ಯ ಆಡಳಿತ ಸಂಯೋಜಕರಾದ ಡಾ. ಆರ್. ನಾಗರಾಜ ಮಾತನಾಡಿ, ಸುರಕ್ಷಿತ ಪರಿಸರದ ಹಕ್ಕು ಗ್ರಾಹಕರ ಹಕ್ಕುಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದ್ದು ಪ್ರತಿಯೊಬ್ಬ ಗ್ರಾಹಕನೂ ಇದರ ಪರವಾಗಿ ಹೋರಾಡುವ ಅಗತ್ಯವಿದೆ. ಖಿಡಿಚಿಟಿಣoಟಿ ಣo ಅಟeಚಿಟಿeಡಿ ಇಟಿeಡಿgಥಿ ಎಂಬುದು ವಿಶ್ವಗ್ರಾಹಕರ ದಿನ 2023ರ ಥೀಮ್ ಆಗಿದ್ದು ನಾವು ಹೇಗೆ ಕೊಡುಗೆಗಳನ್ನು ನೀಡಬಹುದು ಎಂದು ವಿವರಿಸಿದರು.
ಪಿಇಎಸ್‌ಐಟಿಎಂನ ಪ್ರಾಂಶುಪಾಲರಾದ ಡಾ. ಎಂ.ವಿ. ಚೈತನ್ಯಕುಮಾರ್ ಅವರು ಮಾತನಾಡುತ್ತಾ ತಂತ್ರಜ್ಞಾನವು ಜಗತ್ತನ್ನು ಹೇಗೆ ಬದಲಾಯಿಸಿದೆ ಮತ್ತು ಪ್ರತಿಯೊಬ್ಬ ಗ್ರಾಹಕರ ಮೇಲೆ ಪ್ರಭಾವವನ್ನು ಬೀರುತ್ತಿದೆ ಎಂಬುದನ್ನು ತಿಳಿಸಿದರು.
ಸಮಾರಂಭದಲ್ಲಿ 150 ಎಂಬಿಎ ಮತ್ತು ಎಂಕಾಂ ವಿದ್ಯಾರ್ಥಿಗಳು ಭಾಗವಹಿಸಿ ಗ್ರಾಹಕರ ಹಕ್ಕುಗಳ ಕುರಿತಾಗಿ ಅರಿವನ್ನು ಹೆಚ್ಚಿಸಿಕೊಂಡರು. ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ. ಟಿ.ಎಂ. ಪ್ರಸನ್ನಕುಮಾರ್ ಅತಿಥಿಗಳನ್ನು ಸ್ವಾಗತಿಸಿ, ಎಂಬಿಎ ವಿಭಾಗದ ಪ್ರಾಧ್ಯಾಪಕರಾದ ಡಾ. ಅರವಿಂದ್ ಮಲ್ಲಿಕ್ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post