ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಸೀದಿಗಳಲ್ಲಿ ಅಜಾನ್ #Azan ಕೂಗುವ ಬಗ್ಗೆ ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ #D S Arun ಆಕ್ಷೇಪ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇದರ ವಿರುದ್ದ ಹೋರಾಟ ಶುರುವಾಗಲಿದೆ ಎಂದು ಎಚ್ವರಿಸಿದ್ದಾರೆ.
ಅವರು ಇಂದು ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರವು ಸಂಘ- ಸಂಸ್ಥೆಗಳ ಪಥ ಸಂಚಲನಕ್ಕೆ ವಿಧಿಸಿರುವ ನಿರ್ಬಂಧ ಹೇರಿರುವ ಸಂಗತಿ ಪಸ್ತಾಪಿಸಿ ಅವರು, ಅಜಾನ್ ವಿರುದ್ಧದ ಹೋರಾಟದ ಘೋಷಣೆ ಮಾಡಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರವು ಹಿಂದೂಗಳಿಗೆ ಒಂದು ನೀತಿ, ಮುಸಲ್ಮಾನರಿಗೇ ಒಂದುನೀತಿ ಅನುಸರಿಸುತ್ತಿದೆ. ಆರ್‍ಎಸ್‍ಎಸ್ ಸೇರಿ ಹಿಂದೂ ಸಂಘಟನೆಗಳ ಮೇಲೆ ನಿರ್ಬಂಧ ಹೇರುವುದಕ್ಕಾಗಿಯೇ ಪಥ ಸಂಚಲನಗಳಿಗೆ, ಪಾದಯಾತ್ರೆಗಳಿಗೆ ಅನುಮತಿ ಕಡ್ಡಾಯ ಮಾಡಿದೆ. ಆದರೆ ಸರ್ಕಾರ ನಿರ್ಬಂಧ ಹಾಕಬೇಕಿರುವುದು ನಮಗಲ್ಲ, ಅಜಾನ್ ಸೌಂಡ್ ಲಿಮಿಟ್‍ಗೆ ನಿರ್ಬಂಧ ಹಾಕಲಿ, ಕೋರ್ಟ್ ಕೊಟ್ಟ ಸೂಚನೆಗಳನ್ನು ಅನುಷ್ಠಾನಕ್ಕೆ ತರಲು ಶ್ರಮಿಸಲಿ ಎಂದು ಒತ್ತಾಯಿಸಿದರು.

ಶಾಸಕರಿಗೆ ಕೊಡಬೇಕಾದ ಅನುದಾನಗಳು ಒಂದು ನಯಾಪೈಸೆ ಬಂದಿಲ್ಲ. 25 ಕೋಟಿ ರೂ. ನೀಡುವುದಾಗಿ ಘೋಷಣೆ ಮಾತ್ರ ಮಾಡಿದ್ದಾರೆ. ಈ ವರ್ಷದ ಅನುದಾನ 2 ಕೋಟಿ ರೂ. ಕೂಡ ಬಂದಿಲ್ಲ. ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಅನುದಾನವಿಲ್ಲದೆ ಹಿನ್ನಡೆಯಾಗಿದೆ. ಒಂದು ಪಂಚಾಯ್ತಿಗೆ 40 ಸಾವಿರ ರೂ.ಗಳು ಮಾತ್ರ ಬರುತ್ತದೆ. ಅದನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post