ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೂತನ ವಿಮಾನ ನಿಲ್ದಾಣದಲ್ಲಿ Shivamogga Airport ಕೆಲಸಗಳಿಗೆ ನೇಮಕಾತಿ ನಡೆಯುತ್ತಿದೆ ಎಂಬ ಪೋಸ್ಟರ್ ನಕಲಿಯಾಗಿದ್ದು, ಈ ರೀತಿ ಯಾವುದೇ ರೀತಿಯ ನೇಮಕಾತಿ ನಡೆಯುತ್ತಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಧಿವೇಶನ ಮುಗಿಸಿಕೊಂಡು ನಿನ್ನೆ ನಾನು ಆಗಮಿಸಿದ್ದು, ಈ ಪೋಸ್ಟರ್ ಕುರಿತಂತೆ ಗಮನಕ್ಕೆ ಬಂದಿದೆ. ಅಲ್ಲದೇ ಮಾಧ್ಯಮದ ವರದಿಗಳನ್ನೂ ಸಹ ಗಮನಿಸಿದ್ದು, ಈ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳ ಹೇಳಿಕೆಯನ್ನೂ ಸಹ ನೋಡಿದ್ದೇನೆ. ವಿಮಾನ ನಿಲ್ದಾಣದಲ್ಲಿ ಯಾವುದೇ ರೀತಿಯ ನೇಮಕಾತಿಗಳು ಸದ್ಯಕ್ಕೆ ನಡೆಯುತ್ತಿಲ್ಲ ಎಂದರು.

ವೈರಲ್ ಪೋಸ್ಟರ್ ನಕಲಿಯಾಗಿದ್ದು, ಇದನ್ನು ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾ ರಕ್ಷಣಾಧಿಕಾಗಿಳು ಕ್ರಮ ಕೈಗೊಂಡಿದ್ದು, ಈಗಾಗಲೇ ಅವರು ಹೇಳಿಕೆಯನ್ನೂ ಸಹ ನೀಡಿದ್ದಾರೆ. ಇಂತಹ ವಿದ್ಯಾರ್ಥಿಗಳು ಹಾಗೂ ಯುವಕರು ಇಂತಹ ಮೋಸದ ಜಾಲದಲ್ಲಿ ಸಿಲುಕುಬಾರದು ಎಂದು ಮನವಿ ಮಾಡಿದರು.











Discussion about this post