ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಚಿವ ಕೆ.ಎಸ್. ಈಶ್ವರಪ್ಪನವರು #Minister Eshwarappa ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಸುಳ್ಳು ಆರೋಪ ಮಾಡಿದ್ದು, ಇವರುಗಳನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ರಾಷ್ಟ್ರಭಕ್ತರ ಬಳಗ #Rashtra Bhakthara Balaga ಆಗ್ರಹಿಸಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಡಿಸಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಪ್ರಮುಖರು ಮಾತನಾಡಿದರು.
ಈಶ್ವರಪ್ಪನವರು ರಾಷ್ಟ್ರ ಧ್ವಜವನ್ನು ಅಗೌರವಿಸಿದ್ದಾರೆ ಎಂದು ಕಾಂಗ್ರೆಸ್ಸಿಗರು ಆರೋಪಿಸಿ ದೇಶದ್ರೋಹಿ ಎಂದು ಪದೇ ಪದೇ ಕರೆದು ಅವಮಾನಿಸುತ್ತಿದ್ದಾರೆ. ಸದನದಲ್ಲಿ ಇದೇ ವಿಷಯವಾಗಿ ಸಚಿವ ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅವಮಾನಿಸಿದರೆಂದು ಸುಳ್ಳು ಅಪಾದನೆ ಮಾಡುತ್ತಾ ಕಲಾಪ ನಡೆಯಲು ಬಿಡದೆ ಧರಣಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ವಿಧಾನ ಸಭೆಯಲ್ಲಿ ರಾಷ್ಟ್ರಧ್ವಜಗಳನ್ನು ಬೇಕಾಬಿಟ್ಟಿ ಹಿಡಿದು ಪ್ರದರ್ಶಿಸಿ ರಾಷ್ಟ್ರ ಧ್ವಜದ ಘನತೆಗೆ ಅಪಚಾರವೆಸಗಿದ್ದಾರೆ. ಈ ದುರ್ನಡತೆಗೆ ಕಾರಣರಾದ ಕಾಂಗ್ರೆಸ್ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್ #D K Shivakumar ಹಾಗೂ ರಾಷ್ಟ್ರಧ್ವಜ #National Flag ಹಿಡಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಶಾಸಕರ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
Also read: ಕಾರಣಗಿರಿ-ಬಪ್ಪನಮನೆ ನಡುವಿನ ಸೇತುವೆ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ ಒಪ್ಪಿಗೆ
ಅಂದು ಶಿವಮೊಗ್ಗದ ಕಾಲೇಜಿನ ಮುಂಭಾಗದಲ್ಲಿ ಖಾಲಿ ಇದ್ದ ಧ್ವಜಸ್ತಂಭ ಏರಿ ಕೇಸರಿ ಧ್ವಜ ಹಾರಿಸಿದ ಹುಡುಗರು ಹಿಜಾಬ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಷಯವನ್ನು ಸುಳ್ಳು ಸುದ್ದಿಯನ್ನಾಗಿ ತಿರುಚಲಾಗಿದೆ. ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಕೇಸರಿ ಹಾರಿಸಿದರೆಂಬ ವಾಸ್ತವಕ್ಕೆ ವ್ಯತಿರಿಕ್ತವಾದ ವಿಷಯ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ನಡುವೆ ಹಿಂದು ವಿರೋಧಿ ಕಾಂಗ್ರೆಸ್ #Congress ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಶಿವಮೊಗ್ಗದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನವಾಗಿದೆ ಎಂದು ಇಲ್ಲದ ಸಲ್ಲದ ವಿವಾದ ಹುಟ್ಟು ಹಾಕಿದರು ಎಂದು ದೂರಿದರು.
ತದನಂತರದಲ್ಲಿ ಮಾಧ್ಯವದವರು ಈಶ್ವರಪ್ಪನವರನ್ನು ಕೇಳಿದಾಗ, ಖಾಲಿ ಧ್ವಜಸ್ತಂಭ ಏರಿ ಭಗವಾಧ್ವಜ ಹಾರಿಸಿದರೇ ಹೊರತು ಯಾವುದೇ ರಾಷ್ಟ್ರಧ್ವಜ ಇಳಿಸಿ ಅವಮಾನ ಮಾಡಿಲ್ಲ. ರಾಷ್ಟ್ರಧ್ವಜದ ಕುರಿತು ನಮಗೆ ಗೌರವವಿದೆ ಎಂದು ಸ್ಪಷ್ಟಪಡಿಸಿದರೂ ಈಶ್ವರಪ್ಪನವರನ್ನು ದೇಶದ್ರೋಹಿ ಎಂದು ಸುಳ್ಳು ಆಪಾದನೆ ಮಾಡಿ ಗೂಂಡ ವರ್ತನೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಸದಸ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಂಘಟಕರು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post