ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
‘ಲಾಫಿಂಗ್ ಬುದ್ಧ’ #Laughing Buddha ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿರ್ಮಾಪಕರಿಗೆ ಲಾಭ ತರುವ ಲಕ್ಷಣಗಳು ಕಾಣುತ್ತಿವೆ ಎಂದು ಚಿತ್ರದ ನಾಯಕ ನಟ ಪ್ರಮೋದ್ ಶೆಟ್ಟಿ #Pramodh Shetty ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರ ಬಿಡುಗಡೆಯಾಗಿ ಒಂದು ವಾರವಾಗಿದ್ದು ಮೊದಲು 100 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಹಂತ ಹಂತವಾಗಿ ಈಗ 150 ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಕುಟುಂಬ ಸಮೇತರಾಗಿ ನೋಡುವ ಚಿತ್ರ ಇದಾಗಿದ್ದು, ನಗೆ ಗಡಲಲ್ಲಿ ಮುಳುಗಿಸುತ್ತದೆ. ಚಿತ್ರದಲ್ಲಿ ಹೆಡ್ ಕಾನ್ ಸ್ಟೆಬಲ್ ಗೋವರ್ಧನ್ ಪಾತ್ರ ನಿರ್ವಹಿಸಿದ್ದೇನೆ. ಅದಕ್ಕಾಗಿ ಡಯಟ್ ಮಾಡಿದ್ದೆ. ಜನರು ಥಿಯೇಟರ್ ಗೆ ಬಂದು ಸಿನಿಮಾ ನೋಡುವುದಿಲ್ಲ ಎಂಬುದು ಸುಳ್ಳು. ಆಗಸ್ಟ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ಸುಗ್ಗಿಯಾಗಿದ್ದು, ಬಂದ ಚಿತ್ರಗಳೆಲ್ಲಾ ಯಶಸ್ಸಿನತ್ತ ಸಾಗಿದೆ. ಒಟಿಟಿ ಪ್ಲಾಟ್‌ಫಾರಂನಲ್ಲಿ ಕನ್ನಡ ಚಿತ್ರಕ್ಕೆ ಅವಕಾಶ ಕಡಿಮೆ. ಪ್ರೇಕ್ಷಕರೇ ನಮಗೆ ಶ್ರೀರಕ್ಷೆ ಎಂದರು.

ಜಲಂಧರ, ಶಹಬ್ಬಾಸ್ ಬಡ್ಡಿ ಮಗನೇ, ಅಧಿಕ ಪ್ರಸಂಗ ಎಂಬ ನನ್ನ ಮೂರು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಅಲ್ಲದೇ, ಮ್ಯಾಕ್ಸ್, ಭಗೀರ, ಸೀತ ಚಿತ್ರದಲ್ಲಿ ಪೋಷಕ ನಟನಾಗಿ ಅದು ಕೂಡ ಬಿಡುಗಡೆಯಾಗಲಿವೆ. ಅಣ್ಣಯ್ಯ ಎಂಬ ಸೀರಿಯಲ್ ಅನ್ನು ರಿಷಬ್ ಶೆಟ್ಟಿ ನಿರ್ಮಾಣದಲ್ಲಿ ಈಗಾಗಲೇ ಪ್ರಾರಂಭಿಸಿದ್ದೇವೆ. ಲಾಫಿಂಗ್ ಬುದ್ದ ಶಿವಮೊಗ್ಗದ ಭದ್ರಾವತಿ, ಸಾಗರ, ಜೋಗ ಮತ್ತು ಕಾರ್ಗಲ್ ನಲ್ಲಿ ಚಿತ್ರೀಕರಣವಾಗಿದೆ. ಇಲ್ಲಿಯ ಅನೇಕ ಕಲಾವಿದರು ಕೂಡ ಇದ್ದಾರೆ ಎಂದರು.

ಗೋಷ್ಠಿಯಲ್ಲಿ ಪ್ರಮುಖರಾದ ವೆಂಕಟೇಶ್ ಮೂರ್ತಿ, ಆಶಿತ್ ಶೆಟ್ಟಿ ಹಾಗೂ ಶಾಶ್ವತ್ ಭಟ್, ಶ್ಯಾಮ್ ಸುಂದರ್, ದೀಪಕ್, ಹೃಷಿಕೇಶ್ ಪೈ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post