ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-3 |
ನಮ್ಮ ಭಾರತ ಮಾತೆಯನ್ನು ಬಂಧಮುಕ್ತಗೊಳಿಸಿ, ಸ್ವಾತಂತ್ರ್ಯ ಪಡೆಯುವ ಪ್ರಯತ್ನದಲ್ಲಿ ಸಶಸ್ತ್ರ ಕ್ರಾಂತಿಯನ್ನು ಪ್ರತಿಪಾದಿಸಿದ, ಭಗತ್ ಸಿಂಗ್’ರಂತಹ #Bhagatsingh ಸ್ವಾತಂತ್ರ್ಯ ಯೋಧರಿಗೆ ಪ್ರೇರಣೆಯಾಗಿ, ಮಾತೃಭೂಮಿಗಾಗಿ ತಮ್ಮ ಜೀವನವನ್ನೇ ಅರ್ಪಿಸಿದ ಮಹಾನ್ ಚೇತನ ನಮ್ಮ ಹೆಮ್ಮೆಯ ವಿನಾಯಕ ದಾಮೋದರ ಸಾವರ್ಕರ್.
ಸಾವರ್ಕರ್ ಬಗ್ಗೆ ನಾನು ಅಧ್ಯಯನ ಮಾಡಿದ್ದು ಅವರ ವಿಷಯವಾಗಿ ಒಂದು ಪ್ರಬಂಧ ಲೇಖನ ಸ್ಪರ್ಧೆ ಇದ್ದಾಗ. ಆ ಸ್ಪರ್ಧೆಯ ನಿಮಿತ್ತವಾಗಿ ಅನೇಕ ಭಾಷಣಗಳನ್ನು, ಪ್ರವಚನಗಳನ್ನು ಕೇಳಿ, ಜೊತೆಯಲ್ಲಿ ಪುಸ್ತಕವೂ ಸಹ ಓದಿದೆ. ಆಗ ಅವರನ್ನು ಅನೇಕ ಆಯಾಮಗಳಿಂದ ಕಾಣಲು ಸಾಧ್ಯವಾಯಿತು.ಸಾವರ್ಕರ್ #VinayakDamodarSavarkar ಕೇವಲ ಒಬ್ಬ ದೇಶ ಭಕ್ತರಲ್ಲ, ಓರ್ವ ಶ್ರೇಷ್ಠವಾದ ಕವಿ, ಉತ್ಕೃಷ್ಟ ಲೇಖಕ ಹಾಗೂ ಉತ್ತಮ ವಾಗ್ಮಿ. ಆಂಗ್ಲ ಅಧಿಕಾರಿಯೊಬ್ಬ ಸಾವರ್ಕರರ ಬಗೆಗಿನ ವರದಿಯಲ್ಲಿ ಅವರ ಭಾಷಣದ ಬಗ್ಗೆ ಹೇಳುವಾಗ ಸಾವರ್ಕರ್ ಮಾತನಾಡುತ್ತಿದ್ದರೆ `ಒಬ್ಬ ಸೇನಾ ನಾಯಕ ತನ್ನ ತಂಡವನ್ನು ಯುದ್ಧಕ್ಕೆ ಹೋಗುವಾಗ ಹುರಿದುಂಬಿಸುವಂತೆ ಇರುತ್ತದೆ’ ಎಂದು ಹೇಳಿರುವುದೇ ಆಗಿದೆ ಎನ್ನುವುದು ಇದಕ್ಕೆ ಉದಾಹರಣೆಯಾಗಿದೆ.
ಆಂಗ್ಲರು ಸಾವರ್ಕರರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಮಯದಲ್ಲಿ ಅವರು ಬರೆದಿರುವ ಭಾಷಣಗಳನ್ನು ಕೂಡ ಒಂದು ಅಪರಾಧವೆಂದು ಪರಿಗಣಿಸಿದ್ದರು ಎಂದರೆ ಅವರ ಭಾಷಣಗಳು ಆಂಗ್ಲರನ್ನು ಅದೆಷ್ಟರ ಮಟ್ಟಿಗೆ ಭಯಪಡಿಸಿತ್ತು ಎನ್ನುವುದು ತಿಳಿಯುತ್ತದೆ.
ಸಾವರ್ಕರ್ ತಾತ್ವಿಕವಾಗಿ ಬಹಳ ದೃಢವಾಗಿದ್ದರು. ತಮ್ಮ ಗುರಿಯನ್ನು ಅತ್ಯಂತ ಸ್ಪಷ್ಟವಾಗಿ ಬಲ್ಲವರಾಗಿದ್ದರು. ದೇಶವನ್ನು ಪರಕೀಯರಿಂದ ಬಿಡುಗಡೆ ಮಾಡಲು ಎಂತಹ ತ್ಯಾಗ ಹಾಗೂ ಸಾಹಸಕ್ಕೂ ಸಹ ಸಿದ್ದರಿದ್ದರು ಎನ್ನುವುದು ಇಂದಿನ ಮಕ್ಕಳಿಗೆ ಮಾದರಿಯಾಗಬೇಕು.
ಆಗಿನ ಕಾಲದಲ್ಲಿ ಲಂಡನ್’ಗೆ ಹೋಗಿ ಮೋಜು ಮಸ್ತಿ ಮಾಡಿದವರೇ ಹೆಚ್ಚು. ಆದರೆ ಆಂಗ್ಲರ ಕಾನೂನನ್ನು ತಿಳಿದು ಅವರ ದೇಶದಲ್ಲೇ ಅವರನ್ನೇ ಸದೆ ಬಡೆಯುವ ಕೆಲಸ ಮಾಡಿದ್ದು ಮಾತ್ರ ಸಾವರ್ಕರ್.
ತಮ್ಮ ಜೀವನಪೂರ್ತಿ ಕಷ್ಟಗಳನ್ನು ಅನುಭವಿಸುತ್ತಾ, ಸ್ವಲ್ಪವೂ ಸಹ ಸುಖದ ಬಗ್ಗೆ ಚಿಂತಿಸದೇ ತಮ್ಮ ಆಸೆ, ಆಕಾಂಕ್ಷೆ, ಸೌಖ್ಯಗಳನ್ನು ತೊರೆದು ಕೇವಲ ದೇಶಕ್ಕೋಸ್ಕರ ಹಗಲಿರುಳು ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ. ಅವರ ದೇಶಭಕ್ತಿ, ಪ್ರಾಮಾಣಿಕತೆ, ದೃಢತೆ, ಸಮರ್ಥ ವ್ಯಕ್ತಿತ್ವ ನನಗೆ ಬಹಳ ಪ್ರೇರಣಾದಾಯಕವಾಗಿದೆ ಎನ್ನುವುದು ನನ್ನ ಪಾಲಿನ ಅದೃಷ್ಠ. ಸಾವರ್ಕರರು ನನ್ನಂತೆಯೇ ಇತರರಿಗೂ ಪ್ರೇರಣೆಯಾಗಲಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post