ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ಸಂಘದ ಭವನದಲ್ಲಿ ಭಾವಗೀತೆ ಗಾಯನ ಸ್ಪರ್ಧೆ ವಿಜೇತರಿಗೆ ಡಿ.14ರ ಶನಿವಾರ ಸಂಜೆ 5:30ಕ್ಕೆ ಬಹುಮಾನ ವಿತರಣೆ ಹಾಗೂ `ಭಾವ ಸಂಧ್ಯಾ’ ಆಯ್ದ ಭಾವಗೀತೆಗಳ ಗಾಯನ ಕಾರ್ಯಕ್ರಮ #Bhavageethe Singing Program ಏರ್ಪಡಿಸಲಾಗಿದೆ.
ಡಾ. ಶಿವಮೊಗ್ಗ ಸುಬ್ಬಣ್ಣ, #Dr. Shivamogga Subbanna ಅವರ ಸಹೋದರರು ಮತ್ತು ಸಹೋದರಿ ಸ್ಥಾಪಿಸಿರುವ ದಿ. ರಂಗನಾಯಕಮ್ಮ ಗಣೇಶರಾವ್ ದತ್ತಿನಿಧಿಯಿಂದ ಆಯೋಜಿಸಲಾಗಿದೆ.

Also read: ಐಕಾನ್ ಸ್ಟಾರ್ ನಟ ಅಲ್ಲು ಅರ್ಜುನ್ ಅರೆಸ್ಟ್ | ಕಾರಣವೇನು?
ಸುಪ್ರಿಯಾ ರಘುನಂದನ್ (ಸುಪ್ರಿಯಾ ಆಚಾರ್ಯ) #Supriya Acharya ಕನ್ನಡ ಸುಗಮ ಸಂಗೀತ ಕ್ಷೇತ್ರದ ಯುವ ಕಲಾವಿದರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಹೆಸರು. ಸಂಗೀತ ಕ್ಷೇತ್ರದ ಪ್ರಸಿದ್ಧ ಕಲಾವಿದರಾದ ಎಸ್.ಪಿ. ಬಾಲಸುಬ್ರಮಣ್ಯಂ, #S P Balasubramanyam ವಾಣಿಜಯರಾಂ, #Vani Jyayaram ಪಿ. ಸುಶೀಲ, #P Susheela ಶಿವಮೊಗ್ಗ ಸುಬ್ಬಣ್ಣ, ರಾಜು ಅನಂತಸ್ವಾಮಿ, ರತ್ನಮಾಲ ಪ್ರಕಾಶ್ ಹಾಗೂ ಪುತ್ತೂರು ನರಸಿಂಹ ನಾಯಕ್ ಅವರೊಂದಿಗೆ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ಸಂಘದ ಅಧ್ಯಕ್ಷ ಪ್ರೊ.ಎಚ್.ಆರ್. ಶಂಕರನಾರಾಯಣ ಶಾಸ್ತ್ರಿ ಅಧ್ಯಕ್ಷತೆ ವಹಿಸಲಿದ್ದಾರೆ. ಭಾವಗೀತೆ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾಧರ ಪ್ರಥಮ, ನವನೀತ್ ರಾಜ್ ದ್ವಿತೀಯ, ಸ್ವಾತಿ ಎಸ್. ಬಾದಲ್ ತೃತೀಯ ಹಾಗೂ ಕೆ.ಪಿ. ಪ್ರಣತಿ, ಸಾಹಿತ್ಯ ಎಂ. ಶೆಟ್ಟರ್ ಸಮಾಧಾನ ಬಹುಮಾನ ಗಳಿಸಿದ್ದಾರೆ.
ಪದವಿಪೂರ್ವ ವಿಭಾಗದಲ್ಲಿ ಎಸ್.ಡಿ. ಅಶ್ವಿತ ಪ್ರಥಮ, ಎಚ್.ಎಸ್. ಸಿರಿಸೌಜನ್ಯ ದ್ವಿತೀಯ, ಮೈತ್ರೆಯಿ ಅವಧಾನಿ ತೃತೀಯ ಹಾಗೂ ಆರ್. ಹೇಮಾ, ಆರಾಧನಾ ರೇವಣ್ಕರ್ ಸಮಾಧಾನ ಬಹುಮಾನಗಳಿಸಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ವಿನಯ್ ಶಿವಮೊಗ್ಗ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post