ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದಲ್ಲಿ Thirthahalli Tunga College ಅರ್ಥಶಾಸ್ತ್ರ ಉಪನ್ಯಾಸಕರಾಗಿ ಹಾಗೂ ಕುವೆಂಪು ವಿಶ್ವವಿದ್ಯಾಲಯದ ವಿವಿಧ ವ್ಯವಸ್ಥೆಯಲ್ಲಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ಹಾಗೂ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದ ಡಾ. ಎಂ.ಎಸ್. ಮಂಜುನಾಥ್ ಅವರು ಸೇವೆಯಿಂದ ನಿವೃತ್ತರಾಗಿದ್ದಾರೆ.
ಕರ್ನಾಟಕ ವಿವಿ ಯಲ್ಲಿ ಪಿಹೆಚ್ಡಿ ಡಾಕ್ಟರೇಟ್ ಪದವಿ ಪಡೆದು, ನಂತರ ಸಹಾಯಕ, ಸಹ ಪ್ರಾಧ್ಯಾಪಕ, ವಿಭಾಗದ ಮುಖ್ಯಸ್ಥರು, ಕುವೆಂಪು ವಿವಿ ಅರ್ಥಶಾಸ್ತ್ರ ಅಧ್ಯಾಪಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಕರ್ನಾಟಕ ರಾಜ್ಯ ಅರ್ಥಶಾಸ್ತ್ರ ವೇದಿಕೆ ಉಪಾಧ್ಯಕ್ಷರಾಗಿ ಅಂತರಾಷ್ಟ್ರೀಯ ಅರ್ಥಶಾಸ್ತ್ರ ಕಾರ್ಯಕ್ರಮಕ್ಕೆ ಆಯ್ಕೆಯಾಗಿ ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಮಂಜುನಾಥ್ ರವರು ಹಲವಾರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಮ್ಮೇಳನದಲ್ಲೂ ಭಾಗವಹಿಸಿದ್ದು, ಇವರ ಲೇಖನಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಯಾಗಿದೆ.
ಇವರು ಬರೆದಿರುವ 5ಕ್ಕೂ ಅಧಿಕ ಲೇಖನಗಳು ಅಂತರಾಷ್ಟ್ರೀಯ ಪುಸ್ತಕಗಳಲ್ಲಿ ಪ್ರಕಟಗೊಂಡಿವೆ. 40ಕ್ಕೂ ಅಧಿಕ ರಾಷ್ಟ್ರೀಯ, ಅಂತರಾಷ್ಟ್ರೀಯ ರಾಜ್ಯಮಟ್ಟದ ಸೆಮಿನಾರ್ ಗಳಲ್ಲೂ ಭಾಗವಹಿಸಿದ್ದಾರೆ. ಐಕ್ಯುಎಸಿ ಸಂಚಾಲಕರಾಗಿ, ಕುವೆಂಪು ವಿವಿ ಅರ್ಥಶಾಸ್ತ್ರ ಮಂಡಳಿ ಅಧ್ಯಕ್ಷರಾಗಿ, ಬಿಒಎಸ್ ಸದಸ್ಯರಾಗಿ ಹಾಗೂ ವಿವಿಯ ಉನ್ನತ ಮಟ್ಟದ ಆಡಳಿತದಲ್ಲೂ ಡಾ. ಮಂಜುನಾಥ್ ಅವರು ಕಾರ್ಯ ನಿರ್ವಹಿಸಿದ್ದಾರೆ.
Also read: ಕಾಂಕ್ರೀಟ್ ಕಟ್ಟಡಕ್ಕೆಡಿಕ್ಕಿ: ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಸಾವು
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮುಂಗಡ ಪತ್ರದ ಬಗ್ಗೆ ಪತ್ರಿಕಾ ವಿಶ್ಲೇಷಕರಾಗಿ ಗುರುತಿಸಿಕೊಂಡಿರುವ ಡಾ. ಮಂಜುನಾಥ್ ರವರು ಸುದೀರ್ಘ 35 ವರ್ಷಗಳ ಕಾಲ ಸೇವೆ ಸಲ್ಲಿಸಿ, ನ. 30ರಂದು ಸೇವೆಯಿಂದ ವಯೋ ನಿವೃತ್ತಿ ಹೊಂದಿದ್ದಾರೆ.
ಇವರಿಗೆ ತುಂಗಾ ವಿದ್ಯಾವರ್ಧಕ ಸಂಘದ ವತಿಯಿಂದ ತೀರ್ಥಹಳ್ಳಿ ತುಂಗಾ ಕಾಲೇಜಿನಲ್ಲಿ ಆತ್ಮೀಯವಾಗಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾವರ್ಧಕ ಸಂಘದ ಪಟ್ಟಮಕ್ಕಿ ಮಹಾಬಲೇಶ್, ಕಾರ್ಯದರ್ಶಿ ರಾಮಣ್ಣ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಅಂಜನಪ್ಪ, ಅದೀಕ್ಷಕಿ ಮೀನಾಕ್ಷಿ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಹಾಗೂ ಜಿ. ಸುಮಿತ್ರ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post