ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾರಣಗಿರಿ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವ ಫೆ.12ರಿಂದ 14ರವರೆಗೆ ನಡೆಯಲಿದೆ.
ಹೋಮ, ಹವನ, ಪಲ್ಲಕ್ಕಿ ಉತ್ಸವ,ರಥೋತ್ಸವ, ಸಾರ್ವಜನಿಕ ಅನ್ನ ಸಂತರ್ಪಣೆ, ರಂಗಪೂಜೆಯೊಂದಿಗೆ ಫೆ.12ರಿಂದ ಬ್ರಹ್ಮರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಪ್ರತಿದಿನ ಸಂಜೆ ಶ್ರೀ ವಿನಾಯಕ ಸಭಾ ವೇದಿಕೆಯಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
Also read: ವೈಜ್ಞಾನಿಕ ಚಿಂತನೆಗಳಿಂದ ಮಾತ್ರ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಸಾಧ್ಯ: ಡಾ. ವಿನಯ್
13ರ ಮಂಗಳವಾರ ವಿನಾಯಕ ಜಯಂತಿಯಂದು ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ರಥೋತ್ಸವ ನಡೆಯಲಿದೆ. ಇದೇ ದಿನ ಬೆಳಿಗ್ಗೆ ಸಾಮೂಹಿಕ ಗಣ ಹೋಮ ವ್ಯವಸ್ಥೆಗೊಳಿಸಲಾಗಿದೆ. ಭಕ್ತರ ಇಷ್ಟಾರ್ಥ ಸಿದ್ದಿಗಾಗಿ ದೇವರಿಗೆ ಸಮರ್ಪಿಸುವ ಹರಕೆಯ ಭಾಗವಾಗಿ ದೇವಾಲಯದಲ್ಲಿ ನಿರಂತರವಾಗಿ ತುಲಾಭಾರ ಸೇವೆ ನಡೆಯಲಿದೆ. 14ರ ಬುಧವಾರ ಸಂಜೆ 6ರಿಂದ ಶ್ರೀ ದೇವರಿಗೆ ರಂಗ ಪೂಜೆ ನಡೆಯಲಿದೆ ಎಂದು ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ಟ್ರಸ್ಟ್ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















