ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮಾಜಸೇವಕ ಅಜಿತ್ ಕುಮಾರ್‌ರವರ ಸ್ಮರಣಾರ್ಥ ಫೆ.23ರ ಶುಕ್ರವಾರ ಸಂಜೆ 5:30ಕ್ಕೆ ನಗರದ ಕರ್ನಾಟಕ ಸಂಘದಲ್ಲಿ ಭಾರತೀಯಂ ಹಾಗೂ ಅಜಿತಶ್ರೀ ಪುರಸ್ಕಾರ್ ಪ್ರದಾನ ಸಮಾರಂಭವನ್ನು ಶಿವಮೊಗ್ಗೆಯ ಸಹಚೇತನ ನಾಟ್ಯಾಲಯ ಹಮ್ಮಿಕೊಂಡಿದೆ.
ಈ ಕುರಿತಂತೆ ಮಾತನಾಡಿದ ಸಹಚೇತನ ನಾಟ್ಯಾಲಯದ ಗೌರವಾಧ್ಯಕ್ಷರೂ ಆದ ಶಾಸಕ ಎಸ್.ಎನ್. ಚನ್ನಬಸಪ್ಪ, ಸಮಾಜವೇ ಕುಟುಂಬ ಸೇವೆಯೇ ಕರ್ತವ್ಯ ಎಂಬ ರೀತಿಯಲ್ಲಿ ಬಾಳಿ ಬದುಕಿದ ಅಜಿತ್ ಕುಮಾರ್ ಅವರು ಹಾಕಿಕೊಟ್ಟ ಸೇವೆಯ ಸಂಪ್ರದಾಯವನ್ನು ಮುಂದುವರೆಸುವ ಸಲುವಾಗಿ ಕಳೆದ 13 ವರ್ಷಗಳಿಂದ ಸಹಚೇತನ ಸಂಸ್ಥೆ ನಿರಂತರವಾಗಿ ಈ ಸೇವಾದಿನವನ್ನು ಆಚರಿಸಿಕೊಂಡು ಬರುತ್ತಿದೆ ಎಂದರು.

Also read: ಫೆ. 23-25 | ಬೆಂಗಳೂರಿನ ವಿವೇಕಾನಂದ ವಿದ್ಯಾಲಯದಲ್ಲಿ ವಿಶೇಷ ಸಂಗೀತ ಕಚೇರಿ ಆಯೋಜನೆ
ನಗರದ ಕರ್ನಾಟಕ ಸಂಘದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತ ಸಹಕಾರ್ಯವಾಹರಾದ ಟಿ. ಪಟ್ಟಾಭಿರಾಮ, ವಿಧಾನ ಪರಿಷತ್ ಮಾಜಿ ಶಾಸಕರಾದ ಎಂ.ಬಿ. ಭಾನುಪ್ರಕಾಶ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದಂತಹ ನಾಗರಾಜ ಪಿ. ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನೃತ್ಯಗುರು ಸಹನಾ ಚೇತನ್ ಉಪಸ್ಥಿತರಿರಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಲು ಸಹಚೇತನ ಬಳಗ ಕೋರಿದೆ.

ಪಾಂಡುರಂಗ ಹ. ಪರಾಂಡೆ: ಶಿವಮೊಗ್ಗದವರೇ ಆದ ಇವರು ಆರ್‌ಎಸ್‌ಎಸ್‌ನ ಸ್ವಯಂಸೇವಕರಾಗಿ ಬಾಲಗೋಕುಲದ ಮೂಲಕ ಇಂದಿನ ನವಪೀಳಿಗೆಗೆ ಸತ್ಸಂಸ್ಕಾರ ಮತ್ತು ಆಚರಣೆಗಳನ್ನು ಬಿತ್ತುತ್ತಾ, ಜಿಲ್ಲೆಯಾದ್ಯಂತ ಮಕ್ಕಳಲ್ಲಿ ಭಾರತೀಯ ಸಂಸ್ಕಾರ ಹಾಗೂ ಸಂಸ್ಕೃತಿ ಉಳಿಸಿ ಈ ಮೂಲಕ ಸಮಾಜದ ಪರಿವರ್ತನೆ ಕಾರಣರಾಗಿದ್ದಾರೆ.
ವನಜಾಕ್ಷಿ ನಾಗೇಂದ್ರಪ್ಪ: ಬೆಂಗಳೂರಿನ ಇವರು ಭಾರತೀಯ ಯೋಗ ಪ್ರಕ್ರಿಯೆಗಳಿಂದ ಜನರ ಸ್ವಾಸ್ಥ್ಯವನ್ನು ಕಾಪಾಡುವ ಪ್ರಯತ್ನ ಹಾಗೂ ಸಮಾಜದ ಹಿತಕ್ಕಾಗಿ ಕಾರ್ಯ ಮಾಡುವ ದೃಢ ಸಂಕಲ್ಪಕ್ಕೆ ಬದ್ದರಾಗಿದ್ದಾರೆ.
ಜ್ಞಾನೇಶ್ವರಿ ಗೋಶಾಲೆ, ಶಿವಮೊಗ್ಗ : ಭಾರತೀಯರ ನಂಬಿಕೆಯಂತೆ ದೇವತಾ ಸ್ವರೂಪಿಯಾದ ಗೋವುಗಳ ಸ್ವಾಸ್ಥ್ಯ ರಕ್ಷಣೆ, ಪಾಲನೆ ಮತ್ತು ಪೋಷಣೆಗಾಗಿ ಸ್ವಯಂಪ್ರೇರಣೆಯಿಂದ ಹೊಣೆಹೊತ್ತು ಅಹರ್ನಿಶಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post