ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಾಜ್ಯದಾದ್ಯಂತ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ಸರ್ಕಾರವು ತಲಾ 3000ರೂಪಾಯಿಗಳ ಆರ್ಥಿಕ ನೆರವನ್ನು ಘೋಷಿಸಿದೆ.
ಈ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆಯಲಿಚ್ಚಿಸುವ ಕಲಾವಿದರು ವೃತ್ತಿ ನಿರತರಾಗಿದ್ದು 35 ವರ್ಷ ಮೇಲ್ಪಟ್ಟ ವರಾಗಿರಬೇಕು ಕನಿಷ್ಠ ಹತ್ತು ವರ್ಷಗಳ ಕಲಾಸೇವೆ ಮಾಡಿರಬೇಕು. ಇದಕ್ಕೆ ಸಂಬಂಧಿಸಿದಂತೆ ಪೂರಕ ಛಾಯಾಚಿತ್ರಗಳನ್ನು ಒದಗಿಸಬೇಕು. ಅರ್ಜಿದಾರರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಶಾಸನ ಪಡೆಯುತ್ತಿರಬಾರದು ಹಾಗೂ ರಾಜ್ಯ , ಕೇಂದ್ರ ,ನಿಗಮ- ಮಂಡಳಿ, ಸರ್ಕಾರಿ ಅನುದಾನಿತ ಸಂಸ್ಥೆಗಳು, ಅರೆ ಸರ್ಕಾರಿ ಸಂಸ್ಥೆಗಳು ಸೇರಿದಂತೆ ಯಾವುದೇ ಸರ್ಕಾರಿ ನೌಕರರಾಗಿರಬಾರದು.

ಕಳೆದ ಸಾಲಿನಲ್ಲಿ ಸಾಮಾನ್ಯ ವಿಶೇಷ ಘಟಕ ಗಿರಿಜನ ಉಪ ಯೋಜನೆಯಡಿ ಸಾಂಸ್ಕೃತಿಕ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ಧನಸಹಾಯ ಪಡೆದ ವಾದ್ಯ ಪರಿಕರ , ವೇಷಭೂಷಣ ಖರೀದಿ,, ಶಿಲ್ಪಕಲೆ ಚಿತ್ರಕಲಾ ಪ್ರದರ್ಶನಕ್ಕೆ ಸಹಾಯಧನ ಪಡೆದವರು ಯೋಜನೆಯಡಿ ಅರ್ಜಿ ಸಲ್ಲಿಸುವಂತಿಲ್ಲ.

ಈ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆಯಲಿಚ್ಚಿಸುವ ಕಲಾವಿದರು ತಮ್ಮ ಹೆಸರು ವಿಳಾಸ ಕಲಾಪ್ರಕಾರ ಆಧಾರ್ ಸಂಖ್ಯೆ ದೂರವಾಣಿ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಜಿಲ್ಲೆಯಲ್ಲಿರುವ ಎಲ್ಲಾ ನಾಗರಿಕ ಸೇವಾ ಕೇಂದ್ರಗಳು ಅಥವಾ ಮೊಬೈಲ್ ಮೂಲಕ ಆನ್ಲೈನ್ನಲ್ಲಿ ಸೇವಾ ಸಿಂಧು ಪೋರ್ಟಲ್ ನಲ್ಲಿ 2021ರ ಜೂನ್ 5ರೊಳಗಾಗಿ ಸಲ್ಲಿಸುವುದು. ತಪ್ಪು ಮಾಹಿತಿ ನೀಡಿ ಯೋಜನೆಯ ಲಾಭ ಪಡೆದವರ ಮೇಲೆ ವಿಪತ್ತು ನಿರ್ವಹಣಾ ಅಧಿ ನಿಯಮದನ್ವಯ ಕಾನೂನು ಕ್ರಮ ಜರುಗಿಸಲಾಗುವುದು.

ಅರ್ಹರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182 – 223 354 ಅಥವಾ dkc.shimogga@gmail.comನ್ನು ಸಂಪರ್ಕಿಸುವಂತೆ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















