ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಶಂಕರಮಠ ರಸ್ತೆಯಲ್ಲಿರುವ ಹುಂಡೈ ಶೋರೂಂನಲ್ಲಿ Hyundai Showroom ನಿನ್ನೆ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಪಕ್ಕದ ಟಾಟಾ ಶೋರೂಂಗೂ ಸಹ ಇದು ವಿಸ್ತರಿಸಿ ಎರಡೂ ಕಂಪೆನಿಯ ಹಲವು ಕಾರುಗಳು ಸುಟ್ಟುಹೋದ ಘಟನೆ ನಡೆದಿದೆ.
ನಿನ್ನೆ ತಡರಾತ್ರಿ ಹುಂಡೈ ಶೋರೂಂ ಬಲಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ತತಕ್ಷಣ ಬಹಳಷ್ಟು ಕಾರುಗಳನ್ನು ಹೊರಕ್ಕೆ ತೆಗೆದುಕೊಂಡು ಹೋದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ವರದಿಯಾಗಿದೆ.
ರಾಹುಲ್ ಹುಂಡೈನ ಶೋರೂಮ್ ನಲ್ಲಿದ್ದ ಕೋಟ್ಯಾಂತರ ರೂ. ಮೌಲ್ಯ ಆಯಿಲು, ಫರ್ನೀಚರ್’ಗಳು ಸುಟ್ಟುಕರಕಲಾಗಿವೆ. ಈ ಬೆಂಕಿ ಪಕ್ಕದಲ್ಲಿದ್ದ ಟಾಟಾ ಶೋರೂಂ TATA Showroom ವಾಹನಗಳಿಗೂ ತಗುಲಿದ ಪರಿಣಾಮ ಅಲ್ಲಿದ್ದ ನಾಲ್ಕು ವಾಹನಗಳು ಬೆಂಕಿಗೆ ತುತ್ತಾಗಿವೆ.
Also read: ರಾಜ್ಯದ ಹಲವೆಡೆ ಕೆಫೆ ಸಂಜೀವಿನಿ ಆರಂಭ | ಏನಿದು? ಇದರ ಪ್ರಯೋಜನ ಯಾರಿಗೆ ದೊರೆಯಲಿದೆ?
ಇನ್ನು, ಹುಂಡೈ ಶೋಂನ ಒಳಗಿದ್ದ ಕಂಪ್ಯೂಟರ್ ಉಪಕರಣಗಳು, ಕಾರುಗಳ ಬಿಡಿ ಭಾಗಗಳು, ಶೋ ರೂಂನ ಒಂದು ಭಾಗ ಸಂಪೂರ್ಣ ಸುಟ್ಟು ಹೋಗಿದೆ.
ಅಗ್ನಿಶಾಮಕ ಸಿಬ್ಬಂದಿ ಒಂದರ ಹಿಂದೆ ಒಂದು ವಾಹನ ತಂದು ನೀರು ಹಾಯಿಸಿದರು. ಸ್ಥಳೀಯರು, ಕಾರು ಶೋ ರೂಂನ ಸಿಬ್ಬಂದಿಗಳು ಕೂಡ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.
ತಡರಾತ್ರಿವರೆಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಸದ್ಯ ಕಾರು ಶೋಂ ಸುಟ್ಟು ಕರಕಲಾಗಿ ನಿಂತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post