ಗಾಂಧಿನಗರದಲ್ಲಿ ಭೂಗತ ಕೇಬಲ್ ಸಂಪರ್ಕ ಹೊಂದಿರುವ ಫೀಡರ್ ಪಿಲ್ಲರ್ ಬಾಕ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಗರದ ಜನತೆಯಲ್ಲಿ ಭಯ ಮತ್ತು ಆತಂಕ ಉಂಟಾಗಿದ್ದು, ಈ ಯೋಜನೆಗೆ ಸಂಬಂಧಪಟ್ಟ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ನಾಗರಾಜ್ ಕಂಕಾರಿ ಇಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಗಾಂಧಿನಗರದ ಒಂದನೇ ಪ್ಯಾರಲ್ ರೋಡ್ ನಲ್ಲಿ ನಿನ್ನೆ ಭೂಗತ ಕೇಬಲ್ ಸಂಪರ್ಕ ಹೊಂದಿರುವ ಫೀಡರ್ ಪಿಲ್ಲರ್ ಬಾಕ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳು ಮತ್ತು ಭೂಗತ ಕೇಬಲ್ ಸಂಪರ್ಕ ಕಲ್ಪಿಸಿರುವ ಗುತ್ತಿಗೆದಾರರ ನಡುವಿನ ಸಂಪರ್ಕದ ಕೊರತೆಯಿಂದಾಗಿ ಈ ರೀತಿಯ ಅವಘಡಗಳು ನಡೆಯುತ್ತಿವೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

Also read: ಉದ್ರಿ ಆಯುಷ್ ವನ ನಾಡಿಗೆ ಮಾದರಿ: ಅನಂತಹೆಗಡೆ ಅಶಿಸರ
ಫೀಡರ್ ಪಿಲ್ಲರ್ ಬಾಕ್ಸ್ ಅಳವಡಿಸಿರುವ ಕಡೆಗಳಲ್ಲಿ ಪಿಲ್ಲರ್ ಗಳ ನಡುವೆ ಗುಂಡಿ ಇದ್ದು, ಅಲ್ಲದೇ ಯಾವುದೇ ಸುರಕ್ಷತಾ ಕ್ರಮ ಅನುಸರಿಸಿಲ್ಲ. ನೀರು ನಿಲ್ಲದಿರುವ ರೀತಿ ಜಲ್ಲಿ, ಇತರೆ ಸುರಕ್ಷತಾ ಸಾಮಗ್ರಿ ಹಾಕಿಲ್ಲ. ಹಾಗಾಗಿ ಗುಂಡಿಗಳಲ್ಲಿ ನೀರು ನಿಂತು ಶಾರ್ಟ್ ಸರ್ಕ್ಯೂಟ್ ಆಗುತ್ತಿದೆ ಎಂದು ತಿಳಿಸಿದ್ದಾರೆ.
ಈ ರೀತಿ ಹಲವು ಕಡೆಗಳಲ್ಲಿ ಇದೇ ಸಮಸ್ಯೆ ಇದೆ. ಕೂಡಲೇ ಇವನ್ನು ಸರಿಪಡಿಸಬೇಕು. ಸ್ಮಾರ್ಟ್ ಸಿಟಿ ಎರಡನೇ ಎ ಪ್ಯಾಕೇಜ್ ವ್ಯಾಪ್ತಿಯಲ್ಲಿ ಅನೇಕ ಕಳಪೆ ಭೂಗತ ಕೇಬಲ್ ಗಳನ್ನು ಮತ್ತು ಫೀಡರ್ ಪಿಲ್ಲರ್ ಬಾಕ್ಸ್ ಗಳನ್ನು ಹಾಗೂ ಟ್ರಾನ್ಸ್ ಫಾರ್ಮರ್ ಗಳ ಗುಣಮಟ್ಟದಲ್ಲಿ ಅನುಮಾನವಿದ್ದು, ಯೋಜನೆಗೆ ಸಂಬಂಧಪಟ್ಟಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಹೆಚ್. ಪಾಲಾಕ್ಷಿ, ಪ್ರಮುಖರಾದ ನರಸಿಂಹ ಗಂಧದಮನೆ, ಪ್ರಶಾಂತ್ ರಾಯ್, ಎಸ್.ಕೆ. ಭಾಸ್ಕರ್, ಸಿದ್ದಪ್ಪ, ಉಮೇಶ್, ನವಲೆ ಮಂಜುನಾಥ್, ಗಣೇಶ್, ಶ್ಯಾಮ್ ಡಿ. ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post