ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೆಂಗಳೂರು-ಶಿವಮೊಗ್ಗ ನಡುವಿನ ವಿಮಾನ ಹಾರಾಟ ಯಶಸ್ವಿಯಾದ ಕೆಲವೇ ತಿಂಗಳುಗಳ ಅಂತರದಲ್ಲಿ ಇಂದು ಅಂತಾರಾಜ್ಯ ವಿಮಾನವನ್ನು ಸೋಗಾನೆ ವಿಮಾನ ನಿಲ್ದಾಣ Shivamogga Airport ಸ್ವಾಗತಿಸಿದ್ದು, ಈ ಮೂಲಕ ಮಲೆನಾಡಿನ ಬಹು ವರ್ಷಗಳ ಕನಸು ನನಸಾದಂತಾಗಿದೆ.
ಇಂದು ಮುಂಜಾನೆ ಸ್ಟಾರ್ ಏರ್’ನ 83 ಪ್ರಯಾಣಿಕರನ್ನು ಹೊತ್ತ ವಿಮಾನ ಹೈದರಾಬಾದ್’ನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದು, ಈ ಮೂಲಕ ಸೋಗಾನೆ ವಿಮಾನ ನಿಲ್ದಾಣದ ಕಾರ್ಯವ್ಯಾಪ್ತಿ ಮತ್ತಷ್ಟು ವಿಸ್ತಾರಗೊಂಡಿದೆ.
ಬೆಳಗ್ಗೆ 9.35ಕ್ಕೆ ಹೈದರಾಬಾದ್ ವಿಮಾನ ನಿಲ್ದಾಣದಿಂದ ಹೊರಟ ಸ್ಟಾರ್ ಏರ್ ವಿಮಾನ 10.35ಕ್ಕೆ ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
Also read: ಭದ್ರಾವತಿ ಪೊಲೀಸರ ಭರ್ಜರಿ ಬೇಟೆ | ಹನಿ ಟ್ರಾಪ್ ಗ್ಯಾಂಗ್’ನ ಐವರು ಅಂದರ್
ಸ್ಟಾರ್ ಏರ್’ನ Star Airline ಮೊದಲ ವಿಮಾನವನ್ನು ಶಿವಮೊಗ್ಗ ನಿಲ್ದಾಣದಲ್ಲಿ ಸಂಸದ ಬಿ.ವೈ. ರಾಘವೇಂದ್ರ, MP Raghavendra ನಗರ ಶಾಸಕ ಎಸ್.ಎನ್. ಚನ್ನಬಸಪ್ಪ, MLAChannabasappa ಎಂಎಲ್’ಸಿ ಡಿ.ಎಸ್. ಅರುಣ್, MLC DSArun ಎಸ್. ರುದ್ರೇಗೌಡ, ಪ್ರಮುಖರಾದ ಎಸ್.ಎಸ್. ಜ್ಯೋತಿಪ್ರಕಾಶ್, ಎಸ್. ದತ್ತಾತ್ರಿ, ಸುರೇಖಾ ಮುರಳೀಧರ್, ಸ್ಟಾರ್ ಏರ್ ಅಧಿಕಾರಿಗಳು ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳು ಹಾಜರಿದ್ದರು.
ವಿಮಾನವನ್ನು ಸ್ವಾಗತಿಸುವ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಜ್ಯೋತಿ ಪ್ರಜ್ವಲಿಸುವ ಮೂಲಕ ಸಂಸದ ಬಿ.ವೈ. ರಾಘವೇಂದ್ರ ಅವರು ಹೈದರಾಬಾದ್, ತಿರುಪತಿ ಹಾಗೂ ಗೋವಾ ಮಾರ್ಗಗಳಿಗೆ ಸ್ಟಾರ್ ಏರ್ ವಿಮಾನ ಹಾರಾಟಕ್ಕೆ ಸಾಂಪ್ರದಾಯಿಕವಾಗಿ ಚಾಲನೆ ನೀಡಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















