ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಾಗರೀಕರ ದಶಕಗಳ ಕನಸು ನನಸಾಗಲು ಕ್ಷಣಗಣನೆ ಪ್ರಾರಂಭವಾಗಿದ್ದು, ನೂತನ ಏರ್‌ಪೋರ್ಟ್‌ಗೆ ಭಾರತೀಯ ವಾಯುಪಡೆಯ ಬೋಯಿಂಗ್ 737 – 7HI ಮಾದರಿಯ ಮೊಟ್ಟಮೊದಲ ವಿಮಾನ ಇಂದು ಬಂದಿಳಿಯುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ.
ಪ್ರಾಯೋಗಿಕವಾಗಿ ನಡೆದ ಹಾರಾಟದಲ್ಲಿ ಭಾರತೀಯ ವಾಯುಪಡೆಯ ವಿಮಾನ ಇಂದು ಮಧ್ಯಾಹ್ನ ಶಿವಮೊಗ್ಗದ ಸೋಗಾನೆ ನೂತನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿದ್ದು, ಒಟ್ಟು ಎರಡು ವಿಮಾನಗಳು ಬಂದಿಳಿದಿವೆ ಎಂದು ಹೇಳಲಾಗಿದ್ದರೂ ಅಧಿಕೃತ ಮಾಹಿತಿ ಇನ್ನೂ ಖಚಿತಪಡಿಸಿಲ್ಲ.
778 ಎಕರೆಯಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣವನ್ನು ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















