ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬದಲಾಗುತ್ತಿರುವ ಮಾರುಕಟ್ಟೆ ಡೈನಾಮಿಕ್ಸ್ ಅನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಮಹತ್ವದ್ದಾಗಿದೆ, ಸಂಕುಚಿತ ದೃಷ್ಟಿಕೋನಕ್ಕಿಂತ, ಸಮಗ್ರ ಅಭಿವೃದ್ಧಿಯ ಕಡೆಗೆ ಗಮನಹರಿಸುವುದು ಜೀವನದಲ್ಲಿ ತುಂಬಾ ಮುಖ್ಯವಾಗಿದೆ ಎಂದು ಶಾಂತಲಾ ಸ್ಪೆರೋಕಾಸ್ಟ್ ಪ್ರೈ.ಲಿ. ಹಾಗೂ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ನ ಉಪಾಧ್ಯಕ್ಷರಾಗಿರುವ ಡಿ. ಎಸ್. ಚಂದ್ರಶೇಖರ್ ತಿಳಿಸಿದರು.
ನಗರದ ಪ್ರೇರಣಾ ಎಜುಕೇಷನಲ್ & ಸೋಷಿಯಲ್ ಟ್ರಸ್ಟ್‌ನಲ್ಲಿ, ಕ್ಯಾಂಪಸ್ ನೇಮಕಾತಿಗಳ ಮೂಲಕ ಆಯ್ಕೆಯಾದ, 2023ರ ಬ್ಯಾಚ್‌ನ ವಿದ್ಯಾರ್ಥಿಗಳಿಗೆ, ಉದ್ಯೋಗ ಆಯ್ಕೆಯ ಪತ್ರಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ನಿಮಗೆ ವಿದ್ಯೆ ಕೊಟ್ಟು, ಈ ನಿಮ್ಮ ಪ್ರಗತಿಗೆ ಕಾರಣರಾದ ಯಾರನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಿಇಎಸ್ ಟ್ರಸ್ಟ್ ನ, ಟ್ರಸ್ಟೀ ಹಾಗೂ ಜನ ಶಿಕ್ಷಣ ಸಂಸ್ಥಾನದ ನಿರ್ದೇಶಕಿ ಎಸ್. ವೈ. ಅರುಣಾದೇವಿ ಮಾತನಾಡಿ, ಸಮಾರಂಭದಲ್ಲಿ ಭಾಗಿಯಾಗಿರುವ, ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳು, ಅಂತಿಮ ವರ್ಷದ ಆಯ್ಕೆಯಾದ ವಿದ್ಯಾರ್ಥಿಗಳಿಂದ, ಸ್ಫೂರ್ತಿ ಪಡೆದು ಇನ್ನು ಹೆಚ್ಚಿನ ಸಾಧನೆ ಮಾಡಬೇಕೆಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸ್ಥಾಪನೆಯಾದ ಈ ಪಿಇಎಸ್ ಟ್ರಸ್ಟ್, ವರ್ಷದಿಂದ ವರ್ಷಕ್ಕೆ, ಹೊಸ ಹೊಸ ಮೈಲಿಗಲ್ಲನ್ನು ಸ್ಥಾಪಿಸುತ್ತಿರುವುದು ಖುಷಿ ತಂದಿದೆ ಎಂದು ತಿಳಿಸಿದರು. ಅದರೊಂದಿಗೆ, ಬದುಕಿನ ಹೊಸ ಅಧ್ಯಾಯ ಈಗ ಪ್ರಾರಂಭ ಮಾಡುತ್ತಿರುವ ನೀವು, ಎಲ್ಲಿಯೂ ಕುಗ್ಗದೆ ಬರುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಎಂದು ಪ್ರೇರೇಪಿಸಿದರು.
ಟಿಸಿಏಸ್, ಟೆಕ್ ಮಹಿಂದ್ರಾ, ಎಟನ್,ಟಾಟಾ ಎಲೆಕ್ಸಿ, ಟೊಯೊಟಾ, ಐಡಿಯಾ ಇನ್ಫಿನಿಟಿ, ಟ್ರೈಕೋನ್ ಇನ್ಫೋಟೆಕ್,ಕ್ವಾಲಿಟಿಸ್ಟ್, ತ್ರಿವೇಣಿ ಟರ್ಬೈನ್ಸ್, ಎನ್ವೆಂಚರ್, ಐಟಿಸಿ ಫುಡ್ಸ್, ಪ್ರಗತಿ ಆಟೋಮೇಷನ್, ಸಂವಿದ್ ಬಿಲ್ಡ್ ಟೆಕ್ ಪ್ರೈ ಲಿ, ಸನ್ ಗ್ಲ್ಯಾಸ್ಟಿಕ್ ಎಲ್ ಎಲ್ ಪಿ , ಕ್ವಾಲಿಟಿಸ್ಟ್ ,ಮಾಸ್ಟೆಕ್ ಕ್ವಾಡ್ಜೆನ್, ಸೇರಿದಂತೆ ಇನ್ನು ಹತ್ತು ಹಲವಾರು ಕಂಪನಿಗಳು, ಈ 2023 ರ ಸಾಲಿನ ಕ್ಯಾಂಪಸ್ ನೇಮಕಾತಿಯ ಭಾಗವಾಗಿದ್ದವು.
ಪಿಇಎಸ್ ಟ್ರಸ್ಟ್ ನ, ಮುಖ್ಯ ಆಡಳಿತ ಸಂಯೋಜಕ ಡಾ. ನಾಗರಾಜ, ಪಿಇಎಸ್ ಐಟಿಎಂ ನ ಪ್ರಾಂಶುಪಾಲರಾದ ಡಾ. ಚೈತನ್ಯಕುಮಾರ್, ಪಿಇಎಸ್ ಐಎಎಂಎಸ್ ನ ಪ್ರಾಂಶುಪಾಲ ಅರುಣಾ, ಪಿಇಎಸ್ ಪಾಲಿಟೆಕ್ನಿಕ್ ನ ಪ್ರಾಂಶುಪಾಲರಾದ ಪ್ರೊ. ಗೌತಮ್, ಪಿಇಎಸ್ ಟ್ರಸ್ಟ್ ನ ಕೆರಿಯರ್ ಡೆವೆಲಪಮೆಂಟ್ ಸೆಂಟರ್ ನ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ್ ಉಪಸ್ಥಿತರಿದ್ದರು.
ಪಿಇಎಸ್ ಟ್ರಸ್ಟ್ ನ, ಮುಖ್ಯ ಆಡಳಿತ ಸಂಯೋಜಕರಾದ, ಡಾ. ನಾಗರಾಜ. ಆರ್. ಅವರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಪಿಇಎಸ್ ಟ್ರಸ್ಟ್ ನ ಕೆರಿಯರ್ ಡೆವೆಲಪಮೆಂಟ್ ಸೆಂಟರ್ ನ ಮುಖ್ಯಸ್ಥರಾದ, ಡಾ. ಪ್ರಸನ್ನಕುಮಾರ್. ಟಿ.ಎಂ. ಅವರು ವಂದನಾರ್ಪಣೆಯನ್ನು ನೆರವೇರಿಸಿದರು. PESITM, PESIAMS ಮತ್ತು PESPT ಯ ಎಲ್ಲ ವಿಭಾಗದ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಿಇಎಸ್ ಟ್ರಸ್ಟ್ ನ ಆಡಳಿತ ಮಂಡಳಿ, ಟ್ರಸ್ಟೀ ಹಾಗೂ ಸದಸ್ಯರು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















