ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿಯೊಬ್ಬರ ವಿದ್ಯಾರ್ಥಿಯೂ ಸಹ ತನ್ನ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಸಾಧನೆ ಮಾಡಿ ಕಲಿಯುವ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ದೈಹಿಕ ನಿರ್ದೇಶಕ ಜಿ.ಎಸ್. ನಾಗರಾಜ್ ಕರೆ ನೀಡಿದರು.
ನಗರದ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಶುಭ ಕೋರಿ ಅವರು ಮಾತನಾಡಿದರು.
ವಿದ್ಯಾರ್ಧಿಗಳಿಗೆ ಶಿಸ್ತು, ಸಮಯ ಪಾಲನೆ ಹಿರಿಯರಿಗೆ ಗೌರವ ನೀಡಿ ಪೋಷಕರಿಗೆ ಮತ್ತು ಶಾಲೆಗೆ ದೇಶಕ್ಕೆ ಕೀರ್ತಿ ತರುವಂತಹ ಪ್ರಜೆಗಳಾಗಬೇಕು ಎಂದು ವಿದ್ಯಾರ್ಧಿಗಳಿಗೆ ಹಾರೈಸಿದರು.
Also read: ಅಗತ್ಯ ಬಂದರೆ ತಲ್ವಾರ್, ಶಸ್ತ್ರಾಸ್ತ್ರದ ಮೂಲಕ ಉತ್ತರ ಕೊಡಲು ಬರುತ್ತದೆ: ಅರುಣ್ ಪುತ್ತಿಲ ಎಚ್ಚರಿಕೆ
ಶಾಲೆಯ ಪ್ರಾಂಶುಪಾಲರಾದ ಪ್ರಿಯದರ್ಶಿನಿ, ಶಾಲಾ ಸಂಯೋಜಕಿ ದಿವ್ಯ ಶೆಟ್ಟಿ, ಶಾಲೆಯ ಸಿಓಓ ಸುಮಂತ್ ಹಾಗೂ ವ್ಯವಸ್ಥಾಪಕರಾದ ವಿಜಯ್ ಕುಮಾರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post