ಮೊದಲು ನಮ್ಮನ್ನು ನಾವು ಪ್ರೀತಿ ಮಾಡಿದರೆ, ಜಗತ್ತು ಕೂಡ ನಮಗೆ ಪ್ರೀತಿ ಮಾಡುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮನ್ನು ನಾವು ಮೊದಲು ಶುಚಿಯಾಗಿಟ್ಟುಕೊಳ್ಳಬೇಕೆಂದು ಸರ್ಜಿ ಫೌಂಡೇಷನ್ ನ ಮುಖ್ಯಸ್ಥ ಡಾ. ಧನಂಜಯ್ ಸರ್ಜಿ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಗಾಜನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಭಾವಸಾರ ವಿಷನ್ ಇಂಡಿಯಾ ಮತ್ತು ಬೆಲ್ಲಾ ಸಂಸ್ಥೆ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಸ್ಯಾನಿಟರಿ ಶುದ್ಧೀಕರಣದ ಬಗ್ಗೆ ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸು ಕಾಣುವ ಮೂಲಕ ದೊಡ್ಡದಾಗಿ ಬೆಳೆಯಲು ಸಾಧ್ಯ. ಹೀಗಾಗಿ ಏಕಾಗ್ರತೆಯಿಂದ ಬೋಧನಾ ಕ್ರಮ ಅನುಸರಿಸಿ ಎಂದರು.
ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರಿಗೂ, ಆಂತರಿಕ ಶುದ್ಧಿಕರಣ ಬಹಳ ಮಹತ್ವದ್ದಾಗಿದೆ. ಆರೋಗ್ಯದ ದೃಷ್ಟಿಯಿಂದ ಇದು ಅವಶ್ಯಕವಾಗಿದ್ದು, ವ್ಯಾಸಂಗದ ಜೊತೆಗೆ ಇದು ಕೂಡ ಅವಶ್ಯ. ಕೇಳಿ ಕಲಿಯಬೇಕು, ನೋಡಿ ತಿಳಿಯಬೇಕು ಈ ಮೂಲಕ ಜ್ಞಾಪಕಶಕ್ತಿ ವೃದ್ಧಿಯಾಗಿಸಿಕೊಳ್ಳಲು ವಿದ್ಯಾರ್ಥಿನಿಯರು ಮುಂದಾಗಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post