ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಪರಿಸರ ಪೂರಕ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ತನ್ನನ್ನು ತಾನು ಸಮರ್ಪಿಸಿಕೊಂಡಿರುವ ಮಾಸ್ಟರ್ ರೋಹನ್ ಶಿರಿಯವರ ಸಾರಥ್ಯದ ಯೂನಿವರ್ಸಲ್ ನಾಲೇಜ್ ಸಂಸ್ಥೆಯ ಮತ್ತೊಂದು ಮಹೋನ್ನತ ಕಾರ್ಯ ಫುಡ್ ಆನ್ ವಾಲ್ ಇದೀಗ ಶಿವಮೊಗ್ಗದಲ್ಲಿ ಪ್ರಾರಂಭವಾಗಿದೆ.
ಶ್ರೀನಿಧಿ ಸಿಲ್ಕ್ & ಟೆಕ್ಸ್ ಟೈಲ್ಸ್ ಮಾಲೀಕರು ಹಾಗೂ ಸಮಾಜ ಸೇವಾಕರ್ತರೂ ಆದ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿಯವರು ದುರ್ಗಿಗುಡಿಯ ಮಲ್ಲಿಕಾರ್ಜುನ ಚಿತ್ರಮಂದಿರದ ಬಳಿ ಇರುವ ಕೌಸ್ತುಭ ಹೊಟೆಲ್‍ನಲ್ಲಿ ಅಗತ್ಯವಿರುವವರಿಗೆ ಊಟದ ಟೋಕನ್ ವಿತರಿಸುವ ಮೂಲಕ ಅನಾವರಣಗೊಳಿಸಿದರು.
`ಫುಡ್ ಆನ್ ವಾಲ್’ ಎಂಬ ಪರಿಕಲ್ಪನೆಯ ಮೂಲಕ ಅಗತ್ಯವಿರುವವರಿಗೆ ಉಚಿತ ಆಹಾರ ನೀಡುವ ವಿಶಿಷ್ಟ ಕಾರ್ಯಕ್ರಮ ಇದಾಗಿದ್ದು ಅಕ್ಕಪಕ್ಕದ ಹಳ್ಳಿಗಳಿಂದ, ಪರ ಊರುಗಳಿಂದ ನಿತ್ಯ ವಿವಿಧ ಕೆಲಸ ಕಾರ್ಯಗಳಿಗೆ ಬರುವ ಜನರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ವೈದ್ಯಕೀಯ ಚಿಕಿತ್ಸೆಗಳಿಗಾಗಿ ನಗರಕ್ಕೆ ಬರುವವರು ಹೀಗೆ ಯಾರೇ ಇರಬಹುದು, ಕೆಲ ಸಮಯ ಊಟ ಮಾಡಲೂ ಸಹ ಹಣವಿಲ್ಲದ ಸಂದರ್ಭಗಳು ಎದುರಾಗಿರುತ್ತವೆ. ಅಂತಹ ಸಂದರ್ಭಗಳಲ್ಲಿ ಯಾರನ್ನೂ ಬೇಡುವ ಮನಸ್ಸಿಲ್ಲದೇ ಉಪವಾಸವಿದ್ದೇ ಕೆಲಸ ಪೂರೈಸಿಕೊಂಡು ತಮ್ಮ ಮನೆಗಳಿಗೆ ತೆರಳುವ ಉದಾಹರಣೆಗಳು ನಿತ್ಯ ನಡೆಯುತ್ತಿರುತ್ತವೆ.
Also read: ಹೊಳೆಹೊನ್ನೂರಿನಲ್ಲಿ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥರ ಚಾತುರ್ಮಾಸ್ಯ
ಯಾವುದೇ ವ್ಯಕ್ತಿಯನ್ನು ಹಸಿವು ಬಾಧಿಸಬಾರದು ಎಂಬ ಸದುದ್ದೇಶ ಹೊತ್ತು ಯೂನಿವರ್ಸಲ್ ನಾಲೇಜ್ ಸಂಸ್ಥೆಯು ಈ ಸತ್ಕಾರ್ಯಕ್ಕೆ ಚಾಲನೆ ನೀಡಿದೆ. ಹೊಟೆಲ್ ಆವರಣದಲ್ಲಿ ಇಟ್ಟಿರುವ ಫುಡ್ ಆನ್ ವಾಲ್ ಫಲಕದಲ್ಲಿ ಇಟ್ಟಿರುವ ಟೋಕನ್ ಪಡೆದು ಹೋಟೆಲ್‍ನಲ್ಲಿ ನೀಡಿ ಊಟ ಮಾಡಬಹುದಾಗಿದೆ. ಯಾವುದೇ ಹಣವನ್ನು ಆ ಗ್ರಾಹಕ ನೀಡಬೇಕಿಲ್ಲ. ಆ ಹಣವನ್ನು ತಿಂಗಳಿಗೊಮ್ಮೆ ಹೊಟೆಲ್ ಮಾಲೀಕರ ಖಾತೆಗೆ ಟ್ರಸ್ಟ್ ವತಿಯಿಂದ ವರ್ಗಾಯಿಸಲಾಗುತ್ತದೆ.
2023 ಜನವರಿ 2ರಿಂದ ಪ್ರಾರಂಭವಾದ ಈ ಯೋಜನೆ ಈಗಾಗಲೇ ಬೆಂಗಳೂರು, ಮಂಗಳೂರು, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಪುತ್ತೂರುಗಳಲ್ಲಿ ಅನುಷ್ಠಾನಗೊಂಡು ಇದೀಗ ಶಿವಮೊಗ್ಗದಲ್ಲಿ ಪ್ರಾರಂಭವಾಗುತ್ತಿದೆ. ಈ ಯೋಜನೆಯ ಮೂಲಕ ಕೇವಲ ಐದು ತಿಂಗಳಲ್ಲಿ ಐದು ಸಾವಿರದ ಎಂಟು ನೂರಕ್ಕೂ ಅಧಿಕ ಊಟಗಳನ್ನು ವಿತರಿಸಲಾಗಿದೆ. ಒಡಂಬಡಿಕೆ ಮಾಡಿಕೊಂಡ ಆಸಕ್ತ ಹೊಟೆಲ್ ಮಾಲೀಕರೊಂದಿಗೆ ನಿರಂತರವಾಗಿ ಈ ಸೇವೆಯನ್ನು ಒದಗಿಸುವುದು ಯೂನಿವರ್ಸಲ್ ನಾಲೇಜ್ ಸಂಸ್ಥೆಯ ಉದ್ದೇಶವಾಗಿದೆ.
ಸೇವಾ ಮನೋಭಾವವುಳ್ಳ ಹೊಟೆಲ್ ಮಾಲಿಕರು ತಾವೂ ಫುಡ್ ಆನ್ ವಾಲ್ ಕುರಿತು ಆಸಕ್ತಿ ಹೊಂದಿದ್ದಲ್ಲಿ ನಾಗರಾಜ ಶೆಟ್ಟರ್- 94481 39271 ಅಥವಾ ಯೂನಿವರ್ಸಲ್ ನಾಲೇಜ್- 96321 71156 ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post